ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನ ಮೇಳ: ಜಿಲ್ಲೆಗೆ ಸಮಗ್ರ ಪ್ರಶಸ್ತಿ

Last Updated 5 ಫೆಬ್ರುವರಿ 2018, 6:29 IST
ಅಕ್ಷರ ಗಾತ್ರ

ಪುತ್ತೂರು: ರಾಜ್ಯಮಟ್ಟದ ಯುವಜನ ಮೇಳದಲ್ಲಿ ಯುವಕರ ಹಾಗೂ ಯುವ ತಿಯರ ಎರಡೂ ವಿಭಾಗದಲ್ಲೂ ಆತಿ ಥೇಯ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಯುವತಿಯರ ವಿಭಾಗದಲ್ಲಿ ಪುತ್ತೂ ರಿನ ಗುರುಪ್ರಿಯಾ ಆರ್.ನಾಯಕ್ ಅವರು ರಂಗ ಗೀತೆ ಮತ್ತು ಭಾವಗೀತೆ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಯುವಜನ ಮೆಳದಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ. ಯಕ್ಷಗಾನ ಮತ್ತು ದೊಡ್ಡಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದು ಯಕ್ಷಗಾನದಲ್ಲಿ ತನ್ನ ಪ್ರಬುದ್ಧತೆಯನ್ನು ಮೆರೆದಿದೆ.

ವಿಜೇತರು:  ಭಾವಗೀತೆ – ಗುರುಪ್ರಿಯಾ ನಾಯಕ್ ಪ್ರಥಮ ಮತ್ತು ಪುತ್ತೂರಿನ ಅಖಿಲ ಪಜಿಮಣ್ಣು ದ್ವಿತೀಯ , ಉಡುಪಿ ಜಿಲ್ಲೆಯ ತೃಪ್ತಿ ತೃತೀಯ. ಲಾವಣಿ –ಕೊಪ್ಪಳ ಜಿಲ್ಲೆಯ ಸಂಗೀತ ಮಡಿವಾಳ್ ಪ್ರಥಮ, ಉತ್ತರಕನ್ನಡ ಜಿಲ್ಲೆಯ ಆಶಾಲಕ್ಷ್ಮಿ ಕೊಂಡಿ ದ್ವಿತೀಯ , ಕೊಪ್ಪಳ  ರೂಪ ಮಡಿವಾಳ್ ತೃತೀಯ.

ರಂಗಗೀತೆ– ಗುರುಪ್ರಿಯಾ ನಾಯಕ್ ಪ್ರಥಮ , ಉಡುಪಿಯ ಸೀತಾ ಪ್ರಜ್ಞಾ ದ್ವಿತೀಯ, ಚಿಕ್ಕಮಗಳೂರಿನ ರಂಗಿನಿ ಯು.ರಾವ್ ತೃತೀಯ , ಏಕಪಾ ತ್ರಾಭಿನಯ– ಚಿಕ್ಕಮಗಳೂರು  ರಂಗಿನಿ ಯು.ರಾವ್ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಯ ಕಾವ್ಯಶ್ರೀ ಚಿದ್ಗಲ್ ದ್ವಿತೀಯ ಹಾಗೂ ಹಾಸನ ದ ಅಭಿಜ್ಞಾ ತೃತೀಯ ಸ್ಥಾನ .

ಗೀಗಿ ಪದ – ಉತ್ತರ ಕನ್ನಡದ ಪ್ರಥಮ, ಬೆಳಗಾವಿ ಜಿಲ್ಲೆ ದ್ವಿತೀಯ ಹಾಗೂ ಗದಗ ಜಿಲ್ಲೆ ತೃತೀಯ, ಭಜನೆ– ಉ.ಕ. ಜಿಲ್ಲೆ ಪ್ರಥಮ , ಗದಗ ಜಿಲ್ಲೆ ದ್ವಿತೀಯ ಹಾಗೂ ಮಂಡ್ಯ ಜಿಲ್ಲೆ ತೃತೀಯ , ಸೋಬಾನೆ ಸ್ಪರ್ಧೆ– ಬಾಗಲಕೋಟೆ ಜಿಲ್ಲೆ ಪ್ರಥಮ, ಹಾಸನ ಜಿಲ್ಲೆ ದ್ವಿತೀಯ ಹಾಗೂ ಕೊಪ್ಪಳ ಜಿಲ್ಲೆ ತೃತೀಯ, ಜನಪದ ನೃತ್ಯ – ಉಡುಪಿ ಜಿಲ್ಲೆ ಪ್ರಥಮ ,ದ.ಕ. ದ್ವಿತೀಯ ಹಾಗೂ ಗದಗ ಜಿಲ್ಲೆ ತೃತೀಯ . ಜನಪದ ಗೀತೆ– ಕೊಪ್ಪಳ ಜಿಲ್ಲೆ ಪ್ರಥಮ, ಚಿಕ್ಕಮಗಳೂರು ದ್ವಿತೀಯ ಹಾಗೂ ದ.ಕ.ಜಿಲ್ಲೆ ತೃತೀಯ ಸ್ಥಾನ ಪಡೆದಿವೆ.

ರಾಗಿ ಬೀಸುವ ಸ್ಪರ್ಧೆ– ಮಂಡ್ಯದ ಶಾಲಿನಿ ಮತ್ತು ತಂಡ ಪ್ರಥಮ, ಕೊಪ್ಪಳ ಜಿಲ್ಲೆಯ ಚೈತನ್ಯ ಮತ್ತು ತಂಡ ದ್ವಿತೀಯ , ಚಿಕ್ಕಮಗಳೂರು ಜಿಲ್ಲೆಯ ಅನಿತಾ ಮತ್ತು ತಂಡ ತೃತೀಯ , ಕೋಲಾಟ ಸ್ಪರ್ಧೆ ಯಲ್ಲಿ ಚಿಕ್ಕಮಗಳೂರಿನ ಮೂಡಿಗೆರೆ ತಂಡ ಪ್ರಥಮ, ಉಡುಪಿ ಜಿಲ್ಲೆಯ ಚೈತ್ರಾ ಮತ್ತು ತಂಡ ದ್ವಿತೀಯ ಹಾಗೂ ದ.ಕ.ಜಿಲ್ಲೆಯ ಅಮಿತಾ ಮತ್ತು ತಂಡ ತೃತೀಯ ಪ್ರಶಸ್ತಿ ಪಡೆದಿದೆ.

ಯವಕರ ವಿಭಾಗ: ಭಾವಗೀತೆ– ಮಂಡ್ಯದ ರಘು.ಕೆ.ಎಸ್ ಪ್ರಥಮ, ಚಿಕ್ಕಮಗಳೂರು ಮನೋಹರ್ ಎಚ್.ಎಂ.ದ್ವಿತೀಯ ಹಾಗೂ ಕೊಡಗು ಅರುಣ್‍ಕುಮಾರ್ ತೃತೀಯ, ಲಾವಣಿ– ಹಾವೇರಿಯ ಮಂಜುನಾಥ್ ರಾಜ ನಹಳ್ಳಿ ಪ್ರಥಮ , ಹಾಸನದ  ಲೋಕೇಶ್ ದ್ವಿತೀಯ ಹಾಗೂ ಕೊಡಗು ಜಿಲ್ಲೆಯ ರಾಮದಾಸ್ ಹೊಸಹಳ್ಳಿ ತೃತೀಯ.

ರಂಗಗೀತೆ–ದ.ಕ.ದ ಶಿವಶಂಕರ್ ಪ್ರಥಮ, ಚಿಕ್ಕಬಳ್ಳಾಪುರದ ಮಹೇಶ್ ಕುಮಾರ್ ದ್ವಿತೀಯ ಮತ್ತು ಕೋಲಾರದ ಮನೋಜ್ ತೃತೀಯ, ಏಕಪಾತ್ರಾಭಿನಯ–ದ.ಕ.ದ ಸವಣೂರು ಯುವಕ ಮಂಡಲದ ರಾಕೇಶ್ ರೈ ಕೆಡೆಂಜಿ ಪ್ರಥಮ,  ಚಂದ್ರಹಾಸ ಬಳೆಂಜ ದ್ವಿತೀಯ ಹಾಗೂ ಚಿಕ್ಕಮಗಳೂರಿನ ರಮೇಶ್ ಬಂಗಾರ ತೃತೀಯ.

ಗೀಗೀ–ಗದಗ ಜಿಲ್ಲೆಗೆ ಪ್ರಥಮ, ಧಾರವಾಡ ಜಿಲ್ಲೆಗೆ ದ್ವಿತೀಯ, ತುಮಕೂರು ತೃತೀಯ, ಭಜನೆ– ಚಾಮ ರಾಜನಗರ ಪ್ರಥಮ, ದಕ್ಷಿಣಕನ್ನಡ ದ್ವಿತೀಯ ಹಾಗೂ ದಾವಣಗೆರೆ ತೃತೀಯ. ಚರ್ಮವಾದ್ಯ ಮೇಳ–ದಕ್ಷಿಣ ಕನ್ನಡ  ಪ್ರಥಮ ,ಕೋಲಾರ  ದ್ವಿತೀಯ ಹಾಗೂ ಹಾವೇರಿ  ತೃತೀಯ. ಯಕ್ಷಗಾನ ಸ್ಪರ್ಧೆಯಲ್ಲಿ  ಏಕಮಾತ್ರ ತಂಡವಾದ ದ.ಕ.ಜಿಲ್ಲೆಯ ಸವಣೂರು ಯುವಕ ಮಂಡಲ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಜನಪದ ನೃತ್ಯ – ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಹಾಸನ– ದ್ವಿತೀಯ ಹಾಗೂ ಬೆಂಗಳೂರು–ತೃತೀಯ. ಕೋಲಾಟ – ಹಾಸನ ಪ್ರಥಮ, ಗದಗ ದ್ವಿತೀಯ , ತುಮಕೂರು ತೃತೀಯ, ವೀರಗಾಸೆ – ಉಡುಪಿ  ಪ್ರಥಮ, ಶಿವಮೊಗ್ಗ ದ್ವಿತೀಯ ಹಾಗೂ ತುಮಕೂರು ತೃತೀಯ, ಸಣ್ಣಾಟ– ಗದಗ ಜಿಲ್ಲೆ ಪ್ರಥಮ, ಧಾರ ವಾಡ ದ್ವಿತೀಯ, ಚಿಕ್ಕಮಗಳೂರು ತೃತೀಯ .

ದೊಡ್ಡಾಟ– ದಕ್ಷಿಣ ಕನ್ನಡ ಪ್ರಥಮ , ಗದಗ  ದ್ವಿತೀಯ ಮತ್ತು ಕಲಬುರ್ಗಿ ಜಿಲ್ಲೆಗೆ ತೃತೀಯ, ಡೊಳ್ಳುಕುಣಿತ– ದಾವಣಗೆರೆ ಪ್ರಥಮ, ಬಾಗಲಕೋಟೆ  ದ್ವಿತೀಯ ಹಾಗೂ ಉಡುಪಿ  ತೃತೀಯ , ಜನಪದ ಗೀತೆ – ಬೆಂಗಳೂರು ನಗರ ಪ್ರಥಮ,ಧಾರವಾಡ ದ್ವಿತೀಯ ಹಾಗೂ ದಾವಣಗೆರೆ ಜಿಲ್ಲೆ ತೃತೀಯ ಸ್ಥಾನ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT