ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌ ಸೈನಾ ನೆಹ್ವಾಲ್‌ಗೆ ಗೆಲುವು

7
ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಣೀತ್‌, ಶುಭಂಕರ್‌ಗೆ ನಿರಾಸೆ

ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌ ಸೈನಾ ನೆಹ್ವಾಲ್‌ಗೆ ಗೆಲುವು

Published:
Updated:
Prajavani

ಜಕಾರ್ತ: ಭಾರತದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್‌ ಅವರು ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದರು. ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸಿಂಧು, 22–24, 21–8, 21–17ರಲ್ಲಿ ಚೀನಾದ ಲೀ ಕ್ಸುವೆರುಯಿ ಎದುರು ಗೆದ್ದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀಕಾಂತ್‌, ಮಲೇಷ್ಯಾದ ಚಾಂಗ್ ವೀ ಫೆಂಗ್ ಎದುರು 21–12, 21–8ರಿಂದ ಗೆದ್ದರು. ಆದರೆ ಸಾಯಿ ಪ್ರಣೀತ್‌ ಮತ್ತು ಶುಭಂಕರ್‌ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಸಾಯಿ ಪ್ರಣೀತ್‌ 12–21, 16–21ರಲ್ಲಿ ಚೀನಾದ ಚೆನ್‌ ಲಾಂಗ್‌ ಎದುರು ಸೋತರೆ, ಶುಭಂಕರ್‌ 14–21, 21–19, 15–21ರಲ್ಲಿ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸನ್‌ಗೆ ಮಣಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಸ್ಥಳೀಯ ಆಟಗಾರ್ತಿ ದಿನಾರ್‌ ದಿಯಾ ಅಯುಸ್ಟಿನ್‌ ಅವರನ್ನು ಸೈನಾ 7–21, 21–16, 21–11ರಿಂದ ಮಣಿಸಿದರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಮನು ಅತ್ರಿ ಮತ್ತು ಬಿ.ಸುಮಿತ್‌ ರೆಡ್ಡಿ ಜೋಡಿ 14–21, 21–19, 21–15ರಿಂದ ಡೆನ್ಮಾರ್ಕ್‌ನ ಮ್ಯಾಡ್ಸ್‌ ಪೀಲರ್‌ ಕೊಡ್ಲಿಂಗ್‌ ಮತ್ತು ನಿಕ್ಲಾಸ್‌ ನಾರ್‌ ಜೋಡಿಯನ್ನು ಮಣಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ 14–21, 14–21ರಿಂದ ಥಾಯ್ಲೆಂಡ್‌ನ ಜಾಂಗ್ಕೊಲ್ಫನ್ ಕಿಟಿಥರಕುಲ್‌ ಮತ್ತು ರವಿಂದಾ ಪ್ರಜೊಂಗೈ ಜೋಡಿಗೆ ಮಣಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !