ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೆಡ್‌ ಕಪ್‌ ಹಾರ್ಟ್‌’ ಪ್ರಶಸ್ತಿಗೆ ಸಾನಿಯಾ ನಾಮನಿರ್ದೇಶನ

Last Updated 30 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಸಾನಿಯಾ ಮಿರ್ಜಾ ಅವರು ‘ಫೆಡ್‌ ಕಪ್‌ ಹಾರ್ಟ್‌’ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಏಷ್ಯಾ ಒಸೀನಿಯಾ ವಲಯದಿಂದ ಈ ಪ್ರಶಸ್ತಿಗೆ ನಾಮನಿರ್ದೇಶನವಾಗಿರುವ ಭಾರತದ ಮೊದಲ ಟೆನಿಸ್‌ ಆಟಗಾರ್ತಿ ಎಂಬ ಹಿರಿಮೆಗೆ ಅವರು ಭಾಜನರಾಗಿದ್ದಾರೆ.

ಇಂಡೊನೇಷ್ಯಾದ ಪ್ರಿಸ್ಕಾ ಮೆಡೆಲಿನ್‌ ನುಗ್ರೊರೊಹ್‌ ಅವರೂ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.

ನಾಲ್ಕು ವರ್ಷಗಳ ಬಳಿಕ ಫೆಡ್‌ ಕಪ್‌ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಸಾನಿಯಾ, ಭಾರತ ಮಹಿಳಾ ತಂಡವು ಮೊದಲ ಸಲ ‘ಪ್ಲೇ ಆಫ್‌’ಗೆ ಅರ್ಹತೆ ಗಳಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.

‘ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಮೊದಲ ಸಲ ಭಾರತವನ್ನು ಪ್ರತಿನಿಧಿಸಿದಾಗ ಹೆಮ್ಮೆಯ ಭಾವ ಮೂಡಿತ್ತು. ನನ್ನ 18 ವರ್ಷಗಳ ಟೆನಿಸ್‌ ಪಯಣದಲ್ಲಿ ಹಲವು ಸ್ಮರಣೀಯ ಗೆಲುವುಗಳನ್ನು ದಾಖಲಿಸಿದ್ದೇನೆ. ಆ ಮೂಲಕ ಭಾರತದಲ್ಲಿ ಮಹಿಳಾ ಟೆನಿಸ್‌ ಬೆಳವಣಿಗೆಗೆ ಸಾಧ್ಯವಾದಷ್ಟು ಕೊಡುಗೆ ನೀಡಿದ್ದೇನೆ’ ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಗುರುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಸಾನಿಯಾ ಹೇಳಿದ್ದಾರೆ.

‘ಭಾರತ ತಂಡವು ಫೆಡ್‌ಕಪ್‌ನಲ್ಲಿ ‘ಪ್ಲೇ ಆಫ್‌’ ಪ್ರವೇಶಿಸಿದ್ದು ನನ್ನ ವೃತ್ತಿಬದುಕಿನ ಅವಿಸ್ಮರಣೀಯ ಕ್ಷಣಗಳಲ್ಲೊಂದು. ಫೆಡ್‌ ಕಪ್‌ ಹಾರ್ಟ್‌ ಪ್ರಶಸ್ತಿಗೆ ನನ್ನ ಹೆಸರು ಸೂಚಿಸಿರುವ ಆಯ್ಕೆ ಸಮಿತಿಗೆ ಆಭಾರಿಯಾಗಿದ್ದೇನೆ’ ಎಂದು 33 ವರ್ಷ ವಯಸ್ಸಿನ ಆಟಗಾರ್ತಿ ನುಡಿದಿದ್ದಾರೆ.

11ನೇ ಆವೃತ್ತಿಯ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಮೇ 1ರಿಂದ 8ರವರೆಗೆ ಆನ್‌ಲೈನ್‌ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT