ಜಾಹೀರಾತು: ಸಾನಿಯಾ ಅಸಮಾಧಾನ

ಬುಧವಾರ, ಜೂನ್ 19, 2019
25 °C

ಜಾಹೀರಾತು: ಸಾನಿಯಾ ಅಸಮಾಧಾನ

Published:
Updated:
Prajavani

ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಪಂದ್ಯದ ಬಗ್ಗೆ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತು ಕುರಿತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಲಾಕೋಟ್ ಏರ್‌ ಸ್ಟ್ರೈಕ್‌ ಸಂದರ್ಭದಲ್ಲಿ ಪಾಕ್ ಸೇನೆಯಿಂದ ಬಂಧಿತರಾಗಿದ್ದ ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಅಣಕು ಮಾಡುವಂತಹ ಪಾತ್ರಧಾರಿಯೊಬ್ಬ ಇರುವ ಜಾಹೀರಾತನ್ನು ಪಾಕಿಸ್ತಾನದ ಜಾಜ್ ಟಿವಿ ಬಿತ್ತರಿಸಿತ್ತು. 

ಸ್ಟಾರ್ ಟಿವಿಯಲ್ಲಿ ಪಾಕಿಸ್ತಾನವು ಭಾರತಕ್ಕೆ ಸೋಲುವಂತಹ ಸನ್ನಿವೇಶದ ಜಾಹೀರಾತು ಪ್ರಸಾರ ಮಾಡಿದೆ. ಇವುಗಳನ್ನು ಸಾನಿಯಾ ಟೀಕೆ ಮಾಡಿದೆ.

‘ಗಡಿ ಎರಡೂ ಬದಿಯಿಂದ ಪ್ರಸಾರವಾಗುತ್ತಿರುವ ಜಾಹೀರಾತುಗಳು ಚೆನ್ನಾಗಿಲ್ಲ. ಈ ಪಂದ್ಯದ ಸುತ್ತ ಬಹಳಷ್ಟು ನಿರೀಕ್ಷೆಗಳು ಈಗಾಗಲೇ ಗರಿಗೆದರಿವೆ. ಇದು ಕ್ರಿಕೆಟ್ ಅಷ್ಟ್ರೆ. ಅದನ್ನು ಅದೇ ರೀತಿ ನೋಡಿ’ ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !