ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಿತಾ ಮೋರ್‌ಗೆ ಬೆಳ್ಳಿ

ಮಾಟಿಯೊ ಪೆಲಿಕೋನ್ ಕುಸ್ತಿ: ಕಂಚಿ ಗೆದ್ದ ಕುಲದೀಪ್‌
Last Updated 6 ಮಾರ್ಚ್ 2021, 14:32 IST
ಅಕ್ಷರ ಗಾತ್ರ

ನವದೆಹಲಿ: ಉತ್ತಮ ಸಾಮರ್ಥ್ಯ ತೋರಿದ ಭಾರತದ ಸರಿತಾ ಮೋರ್‌ ಅವರು ರೋಮ್‌ನಲ್ಲಿ ನಡೆಯುತ್ತಿರುವ ಮಾಟಿಯೊ ಪೆಲಿಕೋನ್‌ ರ‍್ಯಾಂಕಿಂಗ್ ಸಿರೀಸ್‌ ಕುಸ್ತಿ ಟೂರ್ನಿಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡರು. ಕುಲದೀಪ್ ಮಲಿಕ್ ಕಂಚಿನ ಪದಕ ಗೆದ್ದರು.

ಭಾರತದ ಪೈಲ್ವಾನರು ಗ್ರೀಕೊ ರೋಮನ್ ವಿಭಾಗದಲ್ಲಿ ಶುಕ್ರವಾರ ಮೂರು ಪದಕಗಳನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಭಾರತ ಗೆದ್ದ ಪದಕಗಳ ಸಂಖ್ಯೆ ಐದಕ್ಕೇರಿತು.

ಏಷ್ಯನ್ ಚಾಂಪಿಯನ್‌ ಸರಿತಾ ಮೋರ್‌ ಅವರು ಮಹಿಳೆಯರ 57 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ಬಲ್ಗೇರಿಯಾದ 2–4ರಿಂದ ಗಿಲಿಯಾ ಎದುರು ಸೋತರು.

ಪುರುಷರ ವಿಭಾಗದ ಬೌಟ್‌ನಲ್ಲಿ ಕುಲದೀಪ್ ಮಲಿಕ್‌ (72 ಕೆಜಿ ವಿಭಾಗ) ಅವರು 2014ರ ವಿಶ್ವ ಚಾಂಪಿಯನ್‌, ರಷ್ಯಾದ ಚಿಂಗಿಜ್‌ ಲಾಬಜನೊವ್ ಎದುರು ಗೆದ್ದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

63 ಕೆಜಿ ವಿಭಾಗದಲ್ಲಿ ಅಮೆರಿಕದ ಸ್ಯಾಮ್ಯುಯೆಲ್ ಜೋನ್ಸ್ ಅವರನ್ನು ಮಣಿಸಿದ 6–4ರಿಂದ ಮಣಿಸಿದ ನೀರಜ್‌ ಕೂಡ ಕಂಚಿನ ಪದಕಕ್ಕೆ ಒಡೆಯರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT