ಸೋಮವಾರ, ಏಪ್ರಿಲ್ 19, 2021
31 °C
ಟೇಬಲ್ ಟೆನಿಸ್‌: ಶರತ್ ಕಮಲ್‌, ಮಣಿಕಾ ಬಾತ್ರಾಗೂ ಅವಕಾಶ

ಸತ್ಯನ್, ಸುತೀರ್ಥಾಗೆ ಟೋಕಿಯೊ ಟಿಕೆಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದೋಹಾ: ಭಾರತದ ಟೇಬಲ್ ಟೆನಿಸ್ ಪಟುಗಳಾದ ಜಿ.ಸತ್ಯನ್ ಹಾಗೂ ಸುತೀರ್ಥಾ ಮುಖರ್ಜಿ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಗೇಮ್ಸ್ ಏಷ್ಯನ್ ಅರ್ಹತಾ ಟೂರ್ನಿಯಲ್ಲಿ ಜಿ ಸತ್ಯನ್ ಅವರು 11-5, 11-8, 11-9, 11-2ರಿಂದ ಪಾಕಿಸ್ತಾನದ ಮುಹಮ್ಮದ್ ರಮೀಜ್ ಎದುರು ಗೆದ್ದರು.

ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಸತ್ಯನ್‌ ಅವರು ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಶರತ್ ಕಮಲ್ ಅವರನ್ನು ಸೋಲಿಸಿದ್ದರು.

ವಿಶ್ವ ರ‍್ಯಾಂಕಿಂಗ್ ಹಾಗೂ ಗುರುವಾರ ಪಾಕಿಸ್ತಾನದ ರಮೀಜ್ ಅವರನ್ನು ಮಣಿಸಿದ್ದ ಆಧಾರದ ಮೇಲೆ ಶರತ್ ಕೂಡ ಟೋಕಿಯೊ ಕೂಟಕ್ಕೆ ತೆರಳುವುದು ಖಚಿತವಾಗಿದೆ.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ಕ್ರಮಾಂಕದಲ್ಲಿ 62ನೇ ಸ್ಥಾನದಲ್ಲಿರುವ ಮಣಿಕಾ ಬಾತ್ರಾ ಅವರು ಗುರುವಾರ 11–7, 7–11, 4–11, 11–4, 5–11, 4–11ರಿಂದ ಸುತೀರ್ಥಾ ಮುಖರ್ಜಿ ಎದುರು ಸೋತರು. ಇದರೊಂದಿಗೆ ಸುತೀರ್ಥಾ ಒಲಿಂಪಿಕ್ಸ್ ಅರ್ಹತೆ ಪಡೆದರೆ, ರ‍್ಯಾಂಕಿಂಗ್ ಆಧಾರದಲ್ಲಿ ಮಣಿಕಾ ಕೂಡ ಅರ್ಹತೆ ಗಳಿಸಲಿದ್ದಾರೆ.

ವಿಶ್ವದಾದ್ಯಂತ ನಡೆಯುತ್ತಿರುವ ಅರ್ಹತಾ ಸುತ್ತಿನ ಟೂರ್ನಿಗಳು ಮುಗಿದ ಬಳಿಕ ಐಟಿಟಿಎಫ್‌, ಮಣಿಕಾ ಹಾಗೂ ಶರತ್‌ ಅವರ ಒಲಿಂಪಿಕ್ಸ್ ಅರ್ಹತೆಯನ್ನು ಖಚಿತಪಡಿಸಲಿದೆ.

ಸತ್ಯನ್ ಅವರು ಮೊದಲ ಬಾರಿಗೆ ಒಲಿಂಪಿಕ್ಸ್ ಅರ್ಹತೆ ಗಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು