ಸೈಕ್ಲಿಂಗ್‌: ರಾಜ್ಯದ ಶ್ರೀಧರ ಸವಣೂರ ಚಿನ್ನದ ಸಾಧನೆ

7

ಸೈಕ್ಲಿಂಗ್‌: ರಾಜ್ಯದ ಶ್ರೀಧರ ಸವಣೂರ ಚಿನ್ನದ ಸಾಧನೆ

Published:
Updated:
Deccan Herald

ನವದೆಹಲಿ: ಅಂತರರಾಷ್ಟ್ರೀಯ ಸೈಕ್ಲಿಸ್ಟ್‌, ರಾಜ್ಯದ ಶ್ರೀಧರ ಸವಣೂರ ಅವರು ಇಲ್ಲಿ ನಡೆದ ಭಾರತದ ‍ಪ್ರಮುಖ ಸೈಕ್ಲಾಥಾನ್‌ ‘ಸಕ್ಷಮ್ ಪೆಡಲ್‌’ನಲ್ಲಿ ಭಾನುವಾರ ಚಿನ್ನದ ಸಾಧನೆ ಮಾಡಿದರು.

ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪುರುಷರ ಎಲೀಟ್‌ 50 ಕಿಲೋಮೀಟರ್ ಕ್ರೈಟೀರಿಯಂ ವಿಭಾಗದಲ್ಲಿ ಅವರು ಮೊದಲಿಗರಾದರು. ಎಲೀಟ್ ಮಹಿಳೆಯರ 40 ಕಿಲೋಮೀಟರ್ಸ್ ರೇಸ್‌ನಲ್ಲಿ ಅಂಡಮಾನ್ ನಿಕೋಬಾರ್‌ನ ದೆಬೋರಾ ಹೆರಾಲ್ಡ್‌ ಚಿನ್ನ ಗೆದ್ದರು.

ಬಾಗಲಕೋಟೆ ಜಿಲ್ಲೆಯ ಹುನ್ನೂರು ಗ್ರಾಮದವರಾದ ಶ್ರೀಧರ, ಭಾರತೀಯ ರೈಲ್ವೆಯ ಉದ್ಯೋಗಿಯಾಗಿದ್ದಾರೆ. ಅವರಿಗೆ ತೀವ್ರ ಪೈಪೋಟಿ ಒಡ್ಡಿದ ಕರ್ನಾಟಕದ ಕೃಷ್ಣ ನಾಯ್ಕೋಡಿ ಕಂಚಿನ ಪದಕ ಗೆದ್ದರು. ಬೆಳ್ಳಿ, ಮಂಜೀತ್ ಸಿಂಗ್ ಆವರ ಪಾಲಾಯಿತು.

ಮಹಿಳೆಯರ ವಿಭಾಗದಲ್ಲಿ ಸೊನಾಲಿ ಚಾನು ಬೆಳ್ಳಿ ಗೆದ್ದರೆ, ಸ್ವಾತಿ ಸಿಂಗ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !