ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿತಾಗೆ ಸಾರಥ್ಯ; ಮರಳಿದ ನವಜೋತ್‌ ಕೌರ್

ಡಿಸೆಂಬರ್‌ನಲ್ಲಿ ಎಫ್‌ಐಎಚ್‌ ನೇಷನ್ಸ್ ಕಪ್ ಹಾಕಿ ಟೂರ್ನಿ
Last Updated 9 ನವೆಂಬರ್ 2022, 13:20 IST
ಅಕ್ಷರ ಗಾತ್ರ

ನವದೆಹಲಿ: ಎಫ್ಐಎಚ್‌ ನೇಷನ್ಸ್ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡವನ್ನು ಗೋಲ್‌ಕೀಪರ್ ಸವಿತಾ ಪೂನಿಯಾ ನಾಯಕಿಯಾಗಿ ಮುನ್ನಡೆಸಲಿದ್ದಾರೆ. ದೀಪ್ ಗ್ರೇಸ್ ಎಕ್ಕಾ ಉಪನಾಯಕಿಯಾಗಿದ್ದಾರೆ.

ಸ್ಪೇನ್‌ನಲ್ಲಿ ಡಿಸೆಂಬರ್ 11ರಿಂದ 17ರವರೆಗೆ ನಡೆಯಲಿರುವ ಟೂರ್ನಿಗೆ ನವಜೋತ್ ಕೌರ್ ತಂಡಕ್ಕೆ ಮರಳಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿಕೋವಿಡ್‌ ಕಾರಣದಿಂದ ಅವರು ಆಡಿರಲಿಲ್ಲ.

ನೇಷನ್ಸ್ ಕಪ್ ಮಹತ್ವದ ಟೂರ್ನಿಯಾಗಿದ್ದು ಇಲ್ಲಿ ಚಾಂಪಿಯನ್ ಆದವರು ಎಫ್‌ಐಎಚ್‌ ಮಹಿಳಾ ಪ್ರೊ ಲೀಗ್‌ಗೆ ಬಡ್ತಿ ಪಡೆಯುತ್ತಾರೆ. ಭಾರತ ತಂಡವು ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಚಿಲಿ, ಜಪಾನ್‌, ದಕ್ಷಿಣ ಆಫ್ರಿಕಾ ಈ ಗುಂಪಿನಲ್ಲಿವೆ.

ಡಿ.11ರಂದು ಮೊದಲ ಪಂದ್ಯದಲ್ಲಿ ಸವಿತಾ ಬಳಗ ಚಿಲಿ ಎದುರು ತನ್ನ ಅಭಿಯಾನ ಆರಂಭಿಸಲಿದೆ.

ತಂಡ ಇಂತಿದೆ:ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ.

ಮಿಡ್‌ಫೀಲ್ಡರ್ಸ್: ನಿಶಾ, ಸಲಿಮಾ ಟೆಟೆ, ಸುಶೀಲಾ ಚಾನು ಪುಖ್ರಂಬಮ್, ಮೋನಿಕಾ, ನೇಹಾ, ಸೋನಿಕಾ, ಜ್ಯೋತಿ, ನವಜೋತ್ ಕೌರ್.

ಫಾರ್ವರ್ಡ್ಸ್: ವಂದನಾ ಕಟಾರಿಯಾ, ಲಾಲ್‌ರೆಮ್ಸಿಯಾಮಿ, ನವನೀತ್ ಕೌರ್, ಸಂಗೀತಾ ಕುಮಾರಿ, ಬ್ಯೂಟಿ ಡಂಗ್‌ಡಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT