ಗುರುವಾರ , ಅಕ್ಟೋಬರ್ 24, 2019
21 °C
ನಿರಾಸೆ ಕಂಡ ನೀರಜ ಪೋಗಟ್

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಪ್ರೀ ಕ್ವಾರ್ಟರ್‌ಗೆ ಸವೀತಿ ಬೂರಾ

Published:
Updated:
Prajavani

ಉಲಾನ್ ಉಡೆ, ರಷ್ಯಾ : ಎದುರಾಳಿಯನ್ನು ಪ್ರಬಲ ಪಂಚ್‌ಗಳ ಮೂಲಕ ಕಂಗೆಡಿಸಿದ ಭಾರತದ ಸವೀತಿ ಬೂರಾ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 16ರ ಘಟ್ಟ ಪ್ರವೇಶಿಸಿದರು. 75 ಕೆ.ಜಿ ವಿಭಾಗದ ಬೌಟ್‌ನಲ್ಲಿ ಸವೀತಿ, ಮಂಗೋಲಿಯಾದ ಮ್ಯಾಗ್ಮರ್ಜರ್ಗಲ್ ಎದುರು ಏಕಪಕ್ಷೀಯ (5–0) ಜಯ ಸಾಧಿಸಿದರು.

ಆರಂಭದಿಂದಲೇ ಭರವಸೆಯಿಂದ ಮುನ್ನುಗ್ಗಿದ ಭಾರತದ ಬಾಕ್ಸರ್ ಆಧಿಪತ್ಯ ಸ್ಥಾಪಿಸಿದರು. ಕೊನೆಯ ಮೂರು ನಿಮಿಷಗಳಲ್ಲಿ ಎದುರಾಳಿ ಪ್ರತಿರೋಧ ಒಡ್ಡಿದರೂ ಪಾಯಿಂಟ್ ಗಳಿಸಲು ಆಗಲಿಲ್ಲ. ಮುಂದಿನ ಸುತ್ತಿನಲ್ಲಿ ಸವೀತಿ ಎರಡನೇ ಶ್ರೇಯಾಂಕಿತೆ ಲಾರೆನ್ ಪ್ರೈಸ್ ಎದುರು ಸೆಣಸುವರು.

57 ಕೆ.ಜಿ ವಿಭಾಗದಲ್ಲಿ ನೀರಜ ಪೋಗಟ್ ನಿರಾಸೆ ಅನುಭವಿಸಿದರು. ಮೊದಲ ಸುತ್ತಿನ ಬೌಟ್‌ನಲ್ಲಿ ಅವರು ಚೀನಾದ ಕ್ಯಾವ್ ಜೀರು ಎದುರು ಪ್ರಬಲ ಪೈಪೋಟಿ ನಡೆಸಿ 2–3ರಲ್ಲಿ ಸೋತರು. 

ತಾಂತ್ರಿಕವಾಗಿ ಬಲಿಷ್ಠರಾಗಿದ್ದ ಎದುರಾಳಿಗೆ ಆರಂಭದಲ್ಲಿ ಪೋಗಟ್ ಉತ್ತಮ ಸ್ಪರ್ಧೆ ಒಡ್ಡಿದರು. ಆದರೆ ನಿಧಾನವಾಗಿ ಹಿಡಿತ ಸಾಧಿಸಿದ ಜೀರು ರಕ್ಷಣೆಗೆ ಒತ್ತು ನೀಡಿದರು. ಸಂದರ್ಭ ಸಿಕ್ಕಾಗಲೆಲ್ಲ ಆಕ್ರಮಣಕಾರಿ ಆಟದ ಮೂಲಕ ಪಾಯಿಂಟ್‌ಗಳನ್ನು ಕಲೆ ಹಾಕಿದರು.

ಈ ಬೌಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಾರತ ತಂಡದ ಆಡಳಿತ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಗೆ ದೂರು ಸಲ್ಲಿಸಿತು. ಆದರೆ ತಾಂತ್ರಿಕ ಸಮಿತಿ ಭಾರತದ ಆರೋಪವನ್ನು ತಳ್ಳಿ ಹಾಕಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)