ಆಫ್ರಿಕನ್‌ ಚಾಪಿಯನ್‌ಷಿಪ್‌: ಸೆಮೆನ್ಯಾಗೆ ಜಯ

7

ಆಫ್ರಿಕನ್‌ ಚಾಪಿಯನ್‌ಷಿಪ್‌: ಸೆಮೆನ್ಯಾಗೆ ಜಯ

Published:
Updated:
Deccan Herald

ಅಸಾಬಾ, ನೈಜೀರಿಯಾ: ದಕ್ಷಿಣ ಆಫ್ರಿಕಾದ ಅಥ್ಲೀಟ್‌ ಕಾಸ್ಟರ್‌ ಸೆಮೆನ್ಯಾ ಅವರು ಇಲ್ಲಿ ನಡೆಯುತ್ತಿರುವ ಆಫ್ರಿಕನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. 

ಶುಕ್ರವಾರ ತಡರಾತ್ರಿ ನಡೆದ ಮಹಿಳೆಯರ ವಿಭಾಗದ 400 ಮೀಟರ್ಸ್‌ ಸ್ಪರ್ಧೆಯಲ್ಲಿ ಕಾಸ್ಟರ್‌ ಅವರು 49.96 ಸೆಕೆಂಡುಗಳಲ್ಲಿ ದೂರ ಕ್ರಮಿಸಿದರು. 

ಬೋಟ್‌ಸ್ವಾನಾದ ಕ್ರಿಸ್ಟಿನ್‌ ಬೊಟ್ಲೊಗೆಟ್ವೆ, 51.19 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. 

51.34 ಸೆಕೆಂಡುಗಳಲ್ಲಿ ದೂರ ಕ್ರಮಿಸಿದ ನೈಜೀರಿಯಾದ ಯಿಂಕಾ ಅಜಯಿ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು. 

ಸೆರೆನ್ಯಾ, ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಒಲಿಂಪಿಕ್‌ ಕ್ರೀಡಾಕೂಟದ 800 ಮೀಟರ್ಸ್‌ ಓಟದಲ್ಲಿ ಚಾಂಪಿಯನ್‌ ಆಗಿದ್ದರು. ಆಫ್ರಿಕನ್‌ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿಗೆ ಅವರು 400 ಮೀಟರ್ಸ್‌ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. 

‘ಈ ಮೊದಲು ನಾನು 400 ಮೀಟರ್ಸ್‌ ಓಡಿದ್ದೆ. ಆದರೆ, ಸ್ಪರ್ಧಾತ್ಮಕ ಮಟ್ಟದಲ್ಲಿ ಇದು ಮೊದಲ ಸಲ’ ಎಂದು ಸೆಮೆನ್ಯಾ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !