ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಗಾಯತ್ರಿ– ತ್ರಿಶಾಗೆ ಜಯ

Last Updated 17 ಜನವರಿ 2023, 13:02 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಲಕ್ಷ್ಯಸೇನ್‌ ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವಿನ ಆರಂಭ ಮಾಡಿದ್ದಾರೆ.

ಮಂಗಳವಾರ ಇಲ್ಲಿಯ ಇಂದಿರಾಗಾಂಧಿ ಕ್ರೀಡಾಂಗಣದ ಕೆ.ಡಿ. ಜಾಧವ್‌ ಒಳಾಂಗಣದಲ್ಲಿ ಆರಂಭವಾದ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಲಕ್ಷ್ಯ 21-14, 21-15ರಿಂದ ಭಾರತದವರೇ ಆದ ಎಚ್‌.ಎಸ್‌. ಪ್ರಣಯ್ ಅವರನ್ನು ಮಣಿಸಿದರು. ಇದರೊಂದಿಗೆ ಇತ್ತೀಚೆಗೆ ಮಲೇಷ್ಯಾ ಓಪನ್ ಟೂರ್ನಿಯಲ್ಲಿ ಅನುಭವಿಸಿದ ಸೋಲಿಗೆ ಮುಯ್ಯಿ ತೀರಿಸಿಕೊಂಡರು.

ಮಹಿಳಾ ಡಬಲ್ಸ್ ಜೋಡಿ ತ್ರಿಶಾ ಜೋಲಿ– ಗಾಯತ್ರಿ ಗೋಪಿಚಂದ್‌ ಕೂಡ ಶುಭಾರಂಭ ಮಾಡಿದರು. ಮೊದಲ ಸುತ್ತಿನಲ್ಲಿ 22-20, 17-21, 21-18ರಿಂದ ಫ್ರಾನ್ಸ್‌ನ ಮಾರ್ಗೊಟ್‌ ಲ್ಯಾಂಬರ್ಟ್‌– ಆ್ಯನ್‌ ಟ್ರಾನ್‌ ಅವರನ್ನು ಸೋಲಿಸಿದರು. ಆದರೆ ಎನ್‌. ಸಿಕ್ಕಿ ರೆಡ್ಡಿ ಮತ್ತು ಶ್ರುತಿ ಮಿಶ್ರಾ 17-21, 19-21ರಿಂದ ಜರ್ಮನಿಯ ಲಿಂಡಾ ಎಫ್ಲರ್‌ ಮತ್ತು ಇಸಾಬೆಲ್‌ ಲೊಹಾವು ಎದುರು ಹೋರಾಡಿ ಮಣಿದರು.

ಮೊಮೊಟಾಗೆ ಆಘಾತ: ಎರಡು ಬಾರಿಯ ವಿಶ್ವಚಾಂಪಿಯನ್‌, ಜಪಾನ್‌ನ ಕೆಂಟೊ ಮೊಮೊಟಾ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ 21-15, 21-11ರಿಂದ ಮೊಮೊಟಾ ಅವರನ್ನು ಪರಾಭವಗೊಳಿಸಿದರು.

ಮಹಿಳಾ ಸಿಂಗಲ್ಸ್‌ನಲ್ಲಿ ಥಾಯ್ಲೆಂಡ್‌ನ ರಚನೊಕ್‌ ಇಂತನನ್‌ 21-13, 21-11ರಿಂದ ಮಲೇಷ್ಯಾದ ಗೊ ಜಿನ್ ವೆ ಎದುರು, ಸ್ಪೇನ್‌ನ ಕರೋಲಿನಾ ಮರಿನ್‌ 21-13, 21-18ರಿಂದ ಜಪಾನ್‌ನ ನೊಜೊಮಿ ಒಕುಹರಾ ವಿರುದ್ಧ ಗೆದ್ದು ಬೀಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT