ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಹಾಕಿ ಶಿಬಿರ: ಸುನಿಲ್‌ಗೆ ಸ್ಥಾನ

Last Updated 16 ಫೆಬ್ರುವರಿ 2019, 18:54 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕರ್ನಾಟಕದ ಎಸ್.ವಿ.ಸುನಿಲ್‌ ಸೇರಿದಂತೆ 34 ಮಂದಿ ಆಟಗಾರರನ್ನು ರಾಷ್ಟ್ರೀಯ ಸೀನಿಯರ್ ಆಟಗಾರರ ಹಾಕಿ ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಇದೇ 18ರಂದು ಶಿಬಿರ ಆರಂಭವಾಗಲಿದೆ.

ಮಲೇಷ್ಯಾದ ಇಪೋದಲ್ಲಿ ಮಾರ್ಚ್‌ 23ರಿಂದ ನಡೆಯಲಿರುವ ಸುಲ್ತಾನ್ ಅಜ್ಲಾನ್ ಶಾ ಕಪ್ ಟೂರ್ನಿಗೆ ಈ ಶಿಬಿರದಿಂದ ತಂಡವನ್ನು ಆಯ್ಕೆ ಮಾಡಲಾಗುವುದು. ಶಿಬಿರ ಮಾರ್ಚ್ 18ರ ವರೆಗೆ ನಡೆಯಲಿದೆ.

ಡಿಸೆಂಬರ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಆಡಿದ ತಂಡದಲ್ಲಿದ್ದ ಎಲ್ಲ 18 ಆಟಗಾರರನ್ನು ಶಿಬಿರಕ್ಕೆ ಕರೆಸಿಕೊಳ್ಳಲಾಗಿದೆ.

ಶಿಬಿರಕ್ಕೆ ಆಯ್ಕೆಯಾದವರು: ಗೋಲ್‌ ಕೀಪರ್‌ಗಳು: ಪಿ.ಆರ್.ಶ್ರೀಜೇಶ್‌, ಸೂರಜ್ ಕರ್ಕೇರ, ಕೃಷ್ಣ ಬಹದ್ದೂರ್ ಪಾಠಕ್‌‌; ಡಿಫೆಂಡರ್‌ಗಳು: ಹರ್ಮನ್‌ಪ್ರೀತ್ ಸಿಂಗ್‌, ಗುರಿಂದರ್ ಸಿಂಗ್‌, ವರುಣ್ ಕುಮಾರ್‌, ಖೊತಾಜಿತ್ ಸಿಂಗ್‌, ಸುರೇಂದ್ರ ಕುಮಾರ್‌, ಅಮಿತ್ ರೋಹಿದಾಸ್‌, ಜರ್ಮನ್‌ಪ್ರೀತ್ ಸಿಂಗ್‌, ಪ್ರದೀಪ್ ಸಿಂಗ್‌, ಸುಮನ್ ಬೆಕ್‌, ಮನದೀಪ್ ಮೋರ್‌, ಬೀರೇಂದ್ರ ಲಾಕ್ರ, ರೂಪಿಂದರ್ ಪಾಲ್ ಸಿಂಗ್‌; ಮಿಡ್‌ಫೀಲ್ಡರ್‌ಗಳು: ಮನಪ್ರೀತ್ ಸಿಂಗ್‌, ಚಿಂಗ್ಲೆನ್ಸಾನ ಸಿಂಗ್ ಕಂಗುಜಮ್‌, ಸುಮಿತ್‌, ಸಿಮ್ರನ್‌ಜೀತ್ ಸಿಂಗ್‌, ನೀಲಂಕಂಠ ಶರ್ಮಾ, ಹಾರ್ದಿಕ್ ಸಿಂಗ್‌, ಲಲಿತ್ ಕುಮಾರ್‌ ಉಪಾಧ್ಯಾಯ, ವಿವೇಕ್ ಸಾಗರ್ ಪ್ರಸಾದ್‌, ಯಶ್‌ದೀಪ್‌ ಸಿವಾಚ್‌, ವಿಶಾಲ್ ಅಂಟಿಲ್‌; ಫಾರ್ವರ್ಡ್‌: ಆಕಾಶ್‌ದೀಪ್ ಸಿಂಗ್, ರಮಣ್‌ದೀಪ್ ಸಿಂಗ್‌, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್‌, ದಿಲ್‌ಪ್ರೀತ್ ಸಿಂಗ್, ಸುಮಿತ್‌ ಕುಮಾರ್‌, ಗುರುಸಾಹಬ್‌ಜೀತ್ ಸಿಂಗ್, ಶಿಲಾನಂದ ಲಾಕ್ರ, ಎಸ್‌.ವಿ.ಸುನಿಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT