ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ರಾಷ್ಟ್ರೀಯ ಮಹಿಳಾ ಹಾಕಿ ಶಿಬಿರ: ತಂಡದಲ್ಲಿ 60 ಮಂದಿ

Last Updated 27 ಡಿಸೆಂಬರ್ 2021, 11:26 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಾನನಗರಿ ಬೆಂಗಳೂರಿನಲ್ಲಿ ಸೋಮವಾರ ಆರಂಭಗೊಂಡಿರುವ ರಾಷ್ಟ್ರೀಯ ಮಹಿಳಾ ಹಾಕಿ ತಂಡದ ಶಿಬಿರದಲ್ಲಿ 60 ಮಂದಿ ಪಾಲ್ಗೊಂಡಿದ್ದಾರೆ.

ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ದಕ್ಷಿಣ ಕೇಂದ್ರದಲ್ಲಿ ಶಿಬಿರ ಆಯೋಜನೆಯಾಗಿದೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌, ಅಂತರ ಇಲಾಖೆ ಚಾಂಪಿಯನ್‌ಷಿಪ್‌ ಹಾಗೂ ಹಾಕಿ ಇಂಡಿಯಾ ಆಯೋಜಿಸಿದ್ದ ಇತರ ದೇಶಿ ಟೂರ್ನಿಗಳಲ್ಲಿ ತೋರಿದ ಸಾಮರ್ಥ್ಯವನ್ನು ಪರಿಗಣಿಸಿಶಿಬಿರಕ್ಕೆ ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದೆ.

ಮುಂದಿನ ವರ್ಷ ನಡೆಯಲಿರುವ ಏಷ್ಯಾಕಪ್‌ ಟೂರ್ನಿಯ ಪೂರ್ವಸಿದ್ಧತೆಗೂ ಮೊದಲು ಆಟಗಾರ್ತಿಯರ ಸಂಖ್ಯೆಯನ್ನು 33ಕ್ಕೆ ಕಡಿತಗೊಳಿಸಲಾಗುತ್ತದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.

ತಂಡ: ಗೋಲ್‌ಕೀಪರ್ಸ್: ಸವಿತಾ, ರಜನಿ ಎತಿಮರ್ಪು, ಬಿಚುದೇವಿ ಖರಿಬಮ್, ಅಲ್ಫಾ ಕೆರ್ಕೆತ್ತಾ, ಶ್ವೇತಾ, ಸುಸ್ಮಿತಾ ಪಾಟೀಲ್.

ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಮನ್‌ಪ್ರೀತ್ ಕೌರ್, ರಶ್ಮಿತಾ ಮಿನ್ಜ್‌, ಸುಮನ್ ದೇವಿ ತೌದಮ್, ಮಹಿಮಾ ಚೌಧರಿ, ಗಗನ್‌ದೀಪ್ ಕೌರ್, ಉದಿತಾ, ಅಕ್ಷತಾ ಧೇಕಾಲೆ, ಇಶಿಕಾ ಚೌಧರಿ, ಮರೀನಾ ಲಾಲ್‌ರಾಮ್‌ಗಾಕಿ, ಪ್ರಿಯಾಂಕಾ, ರೀತ್‌, ರೀಮಾ ಬಾಕ್ಸಲಾ, ಅಂಜಲಿ ಎಚ್‌.ಆರ್‌. ರೇಣುಕಾ ಯಾದವ್, ಮುದಿತಾ.

ಮಿಡ್‌ಫೀಲ್ಡರ್ಸ್: ನಿಶಾ, ಸಲೀಮಾ ಟೆಟೆ, ಪುಖ್ರಂಬಮ್ ಸುಶೀಲಾ ಚಾನು, ಜ್ಯೋತಿ, ನವಜೋತ್ ಕೌರ್, ಮೋನಿಕಾ, ಲಿಲಿಮಾ ಮಿನ್ಜ್‌, ನಮಿತಾ ಟೊಪೊ, ರೀನಾ ಖೋಖರ್, ಮರಿಯಾನಾ ಕುಜೂರ್, ಸೋನಿಕಾ, ನೇಹಾ, ಅಜ್ಮಿನಾ ಕುಜೂರ್, ಬಲ್ಜೀತ್ ಕೌರ್, ಸುಷ್ಮಾ ಕುಮಾರಿ.

ಫಾರ್ವಡ್ಸ್: ರಾಣಿ ರಾಂಪಾಲ್‌, ಲಾಲ್‌ರೆಮ್ಸಿಯಾಮಿ, ನವನೀತ್ ಕೌರ್, ರಾಜ್‌ವಿಂದರ್ ಕೌರ್, ವಂದನಾ ಕಟಾರಿಯಾ, ಶರ್ಮಿಳಾ ದೇವಿ, ದೀಪಿಕಾ, ಜೀವನ್ ಕಿಶೋರಿ ಟೊಪ್ಪೊ, ಲಾಲ್ರಿಂದಿಕಿ, ಸಂಗೀತಾ ಕುಮಾರಿ, ಅರ್ಚನಾ ಭಾರದ್ವಾಜ್, ಸರಬ್‌ದೀಪ್‌ ಕೌರ್, ನವಜೋತ್ ಕೌರ್, ಜ್ಯೋತಿ, ಮೋನಿಕಾ ಸಿಹಾಗ್, ಪ್ರೀತಿ ದುಬೆ, ರಜು ರಾಣ್ವಾ, ಆರ್ಯ ಕೆ.ಎಂ, ಉಪಾಸನಾ ಸಿಂಗ್, ದೀಪ್ತಿ ಲಾಕ್ರಾ, ಐಶ್ವರ್ಯ ಚವಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT