ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಸೆರೆನಾಗೆ ಸೋಲು

Last Updated 11 ಆಗಸ್ಟ್ 2022, 14:24 IST
ಅಕ್ಷರ ಗಾತ್ರ

ಟೊರೊಂಟೊ (ಎಎಫ್‌ಪಿ): ಸೆರೆನಾ ವಿಲಿಯಮ್ಸ್‌ ಅವರು ಡಬ್ಲ್ಯುಟಿಎ ಟೊರೊಂಟೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಸೋತರು.

ಬುಧವಾರ ನಡೆದ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ನ ಬೆಲಿಂಡಾ ಬೆನ್ಸಿಕ್‌ 6–2, 6–4 ರಲ್ಲಿ ಸೆರೆನಾ ಅವರನ್ನು ಮಣಿಸಿದರು. ನಿವೃತ್ತಿ ನಿರ್ಧಾರ ಪ್ರಕಟಿಸಿದ ಬಳಿಕ ಅವರು ಆಡಿದ ಮೊದಲ ಪಂದ್ಯ ಇದಾಗಿತ್ತು.

ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯ ಬಳಿಕ ನಿವೃತ್ತಿಯಾಗುವುದಾಗಿ ಸೆರೆನಾ ಎರಡು ದಿನಗಳ ಹಿಂದೆ ಪ್ರಕಟಿಸಿದ್ದರು.

ಇದರಿಂದ ಸೆರೆನಾ ಪಂದ್ಯ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಪಂದ್ಯದುದ್ದಕ್ಕೂ ಅವರು ಅಮೆರಿಕದ ಆಟಗಾರ್ತಿಗೆ ಬೆಂಬಲ ನೀಡಿದರು.

ಪಂದ್ಯದ ಬಳಿಕ ಸೆರೆನಾ ಅವರನ್ನು ಟೂರ್ನಿಯ ಸಂಘಟಕರು ಅಭಿನಂದಿಸಿದರು. ‘ಇಲ್ಲಿ ಆಡುವುದೆಂದರೆ ನನಗಿಷ್ಟ. ಪ್ರತಿ ಬಾರಿಯೂ ಖುಷಿಯಿಂದಲೇ ಇಲ್ಲಿಗೆ ಬರುತ್ತಿದ್ದೆ’ ಎಂದು ಸೆರೆನಾ ಭಾವುಕರಾಗಿ ನುಡಿದರು.

‘ನಾನು ಇನ್ನಷ್ಟು ಉತ್ತಮವಾಗಿ ಆಡಬೇಕಿತ್ತು. ಆದರೆ ಬೆಲಿಂಡಾ ಶ್ರೇಷ್ಠ ಪ್ರದರ್ಶನ ನೀಡಿದರು’ ಎಂದರು.

ಮುಂದಿನ ತಿಂಗಳು 41ನೇ ಹುಟ್ಟುಹಬ್ಬ ಆಚರಿಸಲಿರುವ ಸೆರೆನಾ, ಮೊದಲ ಸುತ್ತಿನಲ್ಲಿ ಸ್ಪೇನ್‌ನ ನುರಿಯಾ ಪ್ಯಾರಿಜಸ್‌ ಅವರನ್ನು ಮಣಿಸಿದ್ದರು.

ಮೆಡ್ವೆಡೆವ್‌ ಮಣಿಸಿದ ಕಿರ್ಗಿಯೊಸ್ (ಮಾಂಟ್ರಿಯಲ್‌): ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌ ಅವರು ಎಟಿಪಿ ಮಾಂಟ್ರಿಯಲ್‌ ಮಾಸ್ಟರ್ಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ 6-7 (2/7), 6-4, 6-2 ರಲ್ಲಿ ವಿಶ್ವದ ಅಗ್ರ ರ‍್ಯಾಂಕಿಂಗ್‌ನ ಆಟಗಾರ ಡೇನಿಯಲ್‌ ಮೆಡ್ವೆಡೆವ್‌ ಅವರನ್ನು ಮಣಿಸಿ ಅಚ್ಚರಿ ಉಂಟುಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT