ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ಸುರುಳಿ ಬಿಚ್ಚುತ್ತಿರುವ ಕೋಚ್ ಲೀಲಾವಿಲಾಸ

Last Updated 28 ಆಗಸ್ಟ್ 2021, 5:55 IST
ಅಕ್ಷರ ಗಾತ್ರ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿದ್ದ ಬ್ಯಾಸ್ಕೆಟ್‌ಬಾಲ್ ಕೋಚ್ ಪ್ರಮೋದ್ ‘ಲೀಲೆ’ಗಳ ಸುರುಳಿ ಈಗ ಒಂದೊಂದಾಗಿ ಬಿಚ್ಚತೊಡಗಿದೆ. ತರಬೇತಿಯ ಸಂದರ್ಭದಲ್ಲಿ ಆತನ ಅಸಹ್ಯ ವರ್ತನೆಗೆ ನೊಂದವರು ಕಣ್ಣೀರು ಹಾಕುತ್ತಿದ್ದಾರೆ.

ನಗರದ ಕ್ಲಬ್ ಒಂದರ ಕೋಚ್‌ ಆಗಿದ್ದ ವೇಳೆ ಪ್ರಮೋದ್ ಎಸಗಿದ ಲೈಂಗಿಕ ಕಿರುಕುಳದ ಬಗ್ಗೆ 20ರಷ್ಟು ಆಟಗಾರ್ತಿಯರ ಆರೋಪಗಳ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆಯಡಿ ಕಳೆದ ಸೆಪ್ಟೆಂಬರ್‌ ನಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಒಂದು ತಿಂಗಳು ಪೊಲೀಸರ ವಶದಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಆದರೆ ಈಗ ತಲೆಮರೆಸಿಕೊಂಡಿದ್ದು ಯಾರ ಕಣ್ಣಿಗೂ ಬೀಳದಂತೆ ತಿರುಗಾಡುತ್ತಿದ್ದಾನೆ. ಪೊಲೀಸರಿಗೂ ಆತನ ಸುಳಿವು ಲಭ್ಯ ಇಲ್ಲ.

ಈ ನಡುವೆ ಆತ ತಮ್ಮನ್ನು ಲೈಂಗಿಕ ವಾಗಿ ಬಳಸಿಕೊಳ್ಳುತ್ತಿದ್ದ ಬಗೆಯನ್ನು ಕೆಲವು ಆಟಗಾರ್ತಿಯರು ವಿವರಿಸಿದ್ದಾರೆ.

ಆರಂಭದಲ್ಲಿ ಕೆಲವು ಕಾಲೇಜು ಗಳಲ್ಲಿ ಕೋಚ್ ಆಗಿದ್ದ ಪ್ರಮೋದ್ ನಂತರ ಕ್ಲಬ್ ಒಂದರಲ್ಲಿ ಸೇರಿಕೊಂಡ. ಅಲ್ಲಿ ತರಬೇತಿಯ ನಂತರ ಆಟಗಾರ್ತಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT