ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಗೇಮ್ಸ್: ಫೈನಲ್‌ಗೆ ಭಾರತ ಟಿಟಿ ತಂಡ

Last Updated 2 ಆಗಸ್ಟ್ 2022, 11:45 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ಅನುಭವಿ ಶರತ್ ಕಮಲ್‌ ಹಾಗೂ ಜಿ.ಸತ್ಯನ್‌ ಅವರ ಸೊಗಸಾದ ಆಟದ ಬಲದಿಂದ ಭಾರತ ಪುರುಷರ ಟೇಬಲ್ ಟೆನಿಸ್ ತಂಡವು ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ಗೆ ಪ್ರವೇಶಿಸಿದೆ.

ಸೋಮವಾರ ರಾತ್ರಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ 3–0ಯಿಂದ ನೈಜೀರಿಯಾ ತಂಡಕ್ಕೆ ಸೋಲುಣಿಸಿತು. ಡಬಲ್ಸ್‌ ಪಂದ್ಯದಲ್ಲಿ ಜಿ.ಸತ್ಯನ್ ಹಾಗೂ ಹರ್ಮೀತ್ ದೇಸಾಯಿ ಅವರು ಒಲಾಜಿದೆ ಒಮೊಟಯಾ ಮತ್ತು ಅಬಿಯೊಡಮ್‌ ಬೋಡೆ ಅವರನ್ನು ನೇರ ಗೇಮ್‌ಗಳಿಂದ ಮಣಿಸಿದರು.

ಮೊದಲ ಸಿಂಗಲ್ಸ್ ಹಣಾಹಣಿಯಲ್ಲಿ 40 ವರ್ಷದ ಶರತ್‌11-9, 7-11, 11-8, 15-13ರಿಂದ ವಿಶ್ವ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿರುವ ಅರುಣಾ ಖಾದ್ರಿ ಅವರನ್ನು ಮಣಿಸಿದರು. ಪರಿಚಿತ ಎದುರಾಳಿಗಳ ನಡುವಿನ ಈ ಸೆಣಸಾಟ ಭಾರಿ ಜಿದ್ದಾಜಿದ್ದಿಯಿಂದ ಕೂಡಿತ್ತು.

ಉತ್ತಮ ತಂತ್ರಗಾರಿಕೆಯಿಂದ ಶರತ್ಮೊದಲ ಗೇಮ್‌ಅನ್ನು ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಖಾದ್ರಿ ತಿರುಗೇಟು ನೀಡಿದರು. ಬ್ಯಾಕ್‌ಹ್ಯಾಂಡ್‌ ವಿನ್ನರ್ಸ್‌ಗಳ ಮೂಲಕ ಗಮನಸೆಳೆದ ಭಾರತದ ಆಟಗಾರ ಮೂರನೇ ಗೇಮ್‌ನಲ್ಲಿ ಪಾರಮ್ಯ ಮೆರೆದರು. ರಂಗೇರಿದ ನಾಲ್ಕನೇ ಗೇಮ್‌ ದೀರ್ಘ ಮತ್ತು ವೇಗದ ರ‍್ಯಾಲಿಗಳಿಗೆ ಸಾಕ್ಷಿಯಾಯಿತು. ಅನುಭವದ ಬಲದಿಂದ ಗೆಲುವಿನ ನಗೆ ಬೀರುವಲ್ಲಿ ಶರತ್ ಯಶಸ್ವಿಯಾದರು.

ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಸತ್ಯನ್‌ 11-9, 4-11, 11-6, 11-8ರಿಂದಒಮೊಟಯಾ ಅವರನ್ನು ಮಣಿಸುವುದರೊಂದಿಗೆ ಭಾರತ ಜಯದ ಸಂಭ್ರಮದಲ್ಲಿ ಮಿಂದೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT