ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರಾಗಿ ಶೇಖ್‌ ಅಹಮದ್‌ ‍ಪುನರಾಯ್ಕೆ

Last Updated 5 ಮಾರ್ಚ್ 2019, 19:39 IST
ಅಕ್ಷರ ಗಾತ್ರ

ಬ್ಯಾಂಕಾಕ್‌, ಥಾಯ್ಲೆಂಡ್‌: ಶೇಖ್‌ ಅಹಮದ್‌ ಅಲ್‌ ಫಹಾದ್‌ ಅಲ್‌ ಸಬಾಹ್‌ ಅವರು ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾದ (ಒಸಿಎ) ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

ಬ್ಯಾಂಕಾಕ್‌ನಲ್ಲಿ ಭಾನುವಾರ ನಡೆದ ಒಸಿಎ ಮಹಾ ಸಭೆಯಲ್ಲಿ ಶೇಖ್‌ ಅಹಮದ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅವರು ನಾಲ್ಕು ವರ್ಷ (2019–2023) ಅಧಿಕಾರದಲ್ಲಿರಲಿದ್ದಾರೆ.

ಕುವೈತ್‌ನ ಶೇಖ್‌, 1991ರಲ್ಲಿ ಮೊದಲ ಬಾರಿಗೆ ಒಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಂದಿನಿಂದಲೂ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಸಿಎಯ ಐದು ವಲಯಗಳ ಉಪಾಧ್ಯಕ್ಷರುಗಳಾದ ತಿಮೋಥಿ ಫೋಕ್‌ (ಈಸ್ಟ್‌ ಏಷ್ಯಾ), ಚರೌಕ್‌ ಅರಿರಾಚಕ್ರನ್‌ (ಸೌತ್‌ ಈಸ್ಟ್‌ ಏಷ್ಯಾ), ತೈಮುರ್‌ ಕುಲಿಬಯೇವ್‌ (ಸೆಂಟ್ರಲ್‌ ಏಷ್ಯಾ), ಸೈಯದ್‌ ಆರೀಫ್‌ ಹಸನ್‌ (ಸೌತ್‌ ಏಷ್ಯಾ) ಮತ್ತು ಥಾನಿ ಅಲ್‌ ಕುವಾರಿ (ವೆಸ್ಟ್‌ ಏಷ್ಯಾ) ಅವರು ಅಹಮದ್‌ಗೆ ಬೆಂಬಲ ಸೂಚಿಸಿದ್ದಾರೆ.

ಥಾಯ್ಲೆಂಡ್‌ನ ಖುನ್ಯಿಂಗ್‌ ಪತಾಮ ಲೀಸ್ವಾಡ್‌ಟ್ರಕುಲ್‌ ಮತ್ತು ಚೀನಾದ ವೀ ಜಿಜೊಂಗ್ ಅವರನ್ನು ಕ್ರಮವಾಗಿ ಒಸಿಎ ಸಾಂಸ್ಕೃತಿಕ ಸಮಿತಿ ಮತ್ತು ನೀತಿ ಆಯೋಗದ ಮುಖ್ಯಸ್ಥರುಗಳನ್ನಾಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT