ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಏರ್‌ಗನ್ ಶೂಟಿಂಗ್: ದಿವ್ಯಾಂಶ್, ಇಳವೆನಿಲ್‌ಗೆ ಚಿನ್ನ

Last Updated 1 ಏಪ್ರಿಲ್ 2019, 0:28 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಶೂಟಿಂಗ್ ತಂಡವು ತೈಪೆಯಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಏರ್‌ಗನ್ ಚಾಂಪಿಯನ್‌ಷಿಪ್‌
ನಲ್ಲಿ ಭಾನುವಾರವೂ ಚಿನ್ನದ ಬೇಟೆ ಮುಂದುವರಿಸಿತು.

ಸ್ಪರ್ಧೆಯಲ್ಲಿ ಇದುವರೆಗೆ ಒಟ್ಟು 12 ಚಿನ್ನದ ಪದಕಗಳನ್ನು ತಂಡವು ತನ್ನದಾಗಿಸಿಕೊಂಡಿದೆ. ಅಲ್ಲದೇ ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೂ ತಂಡಕ್ಕೆ ಒಲಿದಿವೆ.

ಐದನೇ ದಿನವಾದ ಇಂದು ದಿವ್ಯಾಂಶ್ ಸಿಂಗ್ ಪನ್ವರ್ ಮತ್ತು ಇಳವೆನಿಲ್ ವಾಳರಿವನ್ ಅವರು ಕ್ರಮವಾಗಿ 10 ಮೀಟರ್ಸ್‌ ಏರ್‌ ರೈಫಲ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆದ್ದರು.

ಪುರುಷರ ವಿಭಾಗದಲ್ಲಿ ದಿವ್ಯಾಂಶ್ ಅವರು 249.7 ಪಾಯಿಂಟ್ಸ್‌ ಗಳಿಸಿದರು. ಕೊರಿಯಾದ ಕಿಮ್ ಬೆಳ್ಳಿ ಮತ್ತು ಶಿನ್ ಅವರು ಕಂಚು ಗೆದ್ದರು.

ಮಹಿಳೆಯರ ಫೈನಲ್‌ನಲ್ಲಿ ಇಳವೆನಿಲ್ ಅವರು 250.5 ಪಾಯಿಂಟ್ಸ್‌ ಗಳಿಸಿ ಮಿಂಚಿದರು. ತೈಪೆಯ ಲಿನ್ ಯಿಂಗ್ ಶಿನ್ ಅವರು ಬೆಳ್ಳಿ ಪದಕ ಗೆದ್ದರು. ಕೊರಿಯಾದ ಪಾರ್ಕ್ ಸನ್‌ಮಿನ್ 229.1 ಪಾಯಿಂಟ್ಸ್‌ ಗಳಿಸಿ ಕಂಚು ಪಡೆದರು.

ಇಳವೆನಿಲ್, ಅಪೂರ್ವಿ ಮತ್ತು ಮೇಘನಾ ಅವರನ್ನೊಳಗೊಂಡ ಭಾರತ ತಂಡವು ಮಹಿಳೆಯರ ತಂಡ ವಿಭಾಗದಲ್ಲಿ 1878.6 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ತೈಪೆ ತಂಡವು 1872.5 ಪಾಯಿಂಟ್ಸ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT