ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್: ಭಾರತದ ಮಹಿಳೆಯರಿಗೆ ಕಂಚು

ಐಎಸ್‌ಎಸ್‌ಎಫ್ ವಿಶ್ವಕಪ್ ಟೂರ್ನಿ: 10 ಮೀ. ಏರ್ ಪಿಸ್ತೂಲ್‌ ವಿಭಾಗದಲ್ಲಿ ಪದಕ
Last Updated 25 ಜೂನ್ 2021, 14:04 IST
ಅಕ್ಷರ ಗಾತ್ರ

ಒಸಿಜೆಕ್‌, ಕ್ರೊವೇಷ್ಯಾ: ಮನು ಭಾಕರ್‌, ಯಶಸ್ವಿನಿ ಸಿಂಗ್ ದೇಸ್ವಾಲ್ ಹಾಗೂ ರಾಹಿ ಸರ್ನೋಬತ್ ಅವರಿದ್ದ ಭಾರತ ಮಹಿಳಾ ತಂಡವು ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌ ಟೂರ್ನಿಯ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ.

ಕಂಚಿನ ಪದಕದ ಸುತ್ತಿನಲ್ಲಿ ಭಾರತದ ಶೂಟರ್‌ಗಳು ಶುಕ್ರವಾರ 16–12 ಅಂತರದಲ್ಲಿ ಹಂಗರಿಯ ವೆರೋನಿಕಾ ಮೇಜೊರ್‌, ಮಿರಿಯಮ್‌ ಜಾಕೊ ಮತ್ತು ಸಾರಾ ರಾಹೆಲ್‌ ಫ್ಯಾಬಿಯನ್ ಅವರ ತಂಡವನ್ನು ಮಣಿಸಿದರು. ಅರ್ಹತಾ ಸುತ್ತಿನಲ್ಲಿ ಭಾರತ 573 ಸ್ಕೋರ್ ಕಲೆಹಾಕಿತ್ತು.

ಇದಕ್ಕೂ ಮೊದಲು 10 ಮೀ. ಏರ್ ರೈಫಲ್ ವಿಭಾಗದ ಕಂಚಿನ ಪದಕದ ಸ್ಪರ್ಧೆಯಲ್ಲಿ ಐಶ್ವರಿಪ್ರತಾಪ್ ಸಿಂಗ್‌ ತೋಮರ್, ದೀಪಕ್‌ ಕುಮಾರ್‌ ಮತ್ತು ದಿವ್ಯಾಂಶ್‌ ಸಿಂಗ್ ಅವರನ್ನೊಳಗೊಂಡ ಭಾರತ ಪುರುಷರ ತಂಡವು 14–16ರಿಂದ ಸರ್ಬಿಯಾ ತಂಡಕ್ಕೆ ಸೋತಿತ್ತು. ಈ ವಿಭಾಗದಲ್ಲಿ ಮಹಿಳೆಯರು ಅರ್ಹತಾ ಸುತ್ತನ್ನೂ ದಾಟಲಿಲ್ಲ.

ಅಂಜುಮ್ ಮೌದ್ಗಿಲ್, ಅಪೂರ್ವಿ ಚಾಂಡೇಲ ಮತ್ತಿ ಇಳವೆನ್ನಿಲಾ ವಾಳರಿವನ್ ಅವರಿದ್ದ ತಂಡವು ಅರ್ಹತಾ ಸುತ್ತಿನಲ್ಲಿ 1867.7 ಪಾಯಿಂಟ್ಸ್ ಸಂಗ್ರಹಿಸಿ 11ನೇ ಸ್ಥಾನ ಗಳಿಸಿತು.

ಮಹಿಳೆಯರ 10 ಮೀ. ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮೂವರು ಮಹಿಳೆಯರು ಫೈನಲ್ ತಲುಪಲು ಗುರುವಾರ ವಿಫಲರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT