ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ಭಾರತದ ಶ್ರೇಷ್ಠ ಸಾಧನೆ

Last Updated 30 ಮೇ 2019, 19:36 IST
ಅಕ್ಷರ ಗಾತ್ರ

ನವದೆಹಲಿ: ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತ ಸರ್ವಶ್ರೇಷ್ಠ ಸಾಧನೆ ಮಾಡಿದೆ. ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಟೂರ್ನಿಯ ಮಿಶ್ರ ವಿಭಾಗಗಳ ಎಲ್ಲ ಪ್ರಶಸ್ತಿಗಳನ್ನೂ ಭಾರತ ಬಗಲಿಗೆ ಹಾಕಿಕೊಂಡಿತು.

ಐದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗಳಿಸಿದ ಭಾರತ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದರೆ, ಎರಡನೇ ಸ್ಥಾನ ಗಳಿಸಿದ ಚೀನಾ ತಲಾ ಎರಡು ಚಿನ್ನ ಮತ್ತು ಬೆಳ್ಳಿ, ಐದು ಕಂಚಿನ ಪದಕ ಗಳಿಸಿತು.

ಗುರುವಾರ ಅಂಜುಮ್ ಮೌದ್ಗಿಲ್ ಮತ್ತು ದಿವ್ಯಾಂಶ್‌ ಸಿಂಗ್ ಪನ್ವರ್ 10 ಮೀ ಏರ್ ರೈಫಲ್‌ ಮಿಶ್ರ ವಿಭಾಗದಲ್ಲಿ ದಿನದ ಮೊದಲ ಚಿನ್ನ ಗಳಿಸಿಕೊಟ್ಟರು. ನಂತರ ಮನು ಭಾಕರ್ ಮತ್ತು ಸೌರಭ್ ಚೌಧರಿ 10 ಮೀ ಏರ್ ಪಿಸ್ತೂಲ್‌ ಮಿಶ್ರ ವಿಭಾಗದಲ್ಲಿ ಚಿನ್ನ ಗೆದ್ದರು. ಅಪೂರ್ವಿ ಚಾಂಡೇಲ ಮತ್ತು ದೀಪಕ್ ಕುಮಾರ್ ಬೆಳ್ಳಿ ಪದಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT