ಶುಕ್ರವಾರ, ನವೆಂಬರ್ 15, 2019
23 °C

ಶೂಟಿಂಗ್‌: ರುಚಿತಾಗೆ ಗೆಲುವು

Published:
Updated:

ನವದೆಹಲಿ  (ಪಿಟಿಐ): ಭಾರತೀಯ ರೈಲ್ವೆಯ ರುಚಿತಾ ರಾಜೇಂದ್ರ ಇಲ್ಲಿ ಸೋಮವಾರ ಆರಂಭಗೊಂಡ ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್‌ನಲ್ಲಿ ಮಹಿಳಾ ವಿಭಾಗದ 10 ಮೀಟರ್ಸ್ ಏರ್‌ ಪಿಸ್ತೂಲ್ ‌ವಿಭಾಗದಲ್ಲಿ ಮೊದಲಿಗರಾದರು. 237.6 ಸ್ಕೋರ್‌ ಕಲೆ ಹಾಕಿದ ಅವರು ತಮಿಳುನಾಡಿನ ಶ್ರೀನಿವೇತಾ (236.8 ) ಅವರನ್ನು ಹಿಂದಿಕ್ಕಿದರು. 216.8 ಸ್ಕೋರ್ ಗಳಿಸಿದ ಹರಿಯಾಣದ ಶಿಖಾ ನರ್ವಾಲ್ ಮೂರನೆಯವರಾದರು.

60 ಶಾಟ್‌ಗಳ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 582 ಸ್ಕೋರ್ ದಾಖಲಿಸಿದ ಶ್ರೀನಿವೇತಾಗೆ ಅಂತಿಮ ಸುತ್ತಿನಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ. ರುಚಿತಾ ಅರ್ಹತಾ ಸುತ್ತಿನಲ್ಲಿ 570 ಸ್ಕೋರುಗಳೊಂದಿಗೆ ಎಂಟನೇ ಸ್ಥಾನಕ್ಕೆ ಕುಸಿದಿದ್ದರು.

ಪ್ರತಿಕ್ರಿಯಿಸಿ (+)