ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌ ವಿಶ್ವಕಪ್‌: ಮಿಶ್ರ ತಂಡ ವಿಭಾಗದಲ್ಲಿ ಪಾರಮ್ಯ

Last Updated 20 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಕೈರೊ, ಈಜಿಪ್ಟ್‌: ಭಾರತದ ಶೂಟರ್‌ಗಳು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಟೂರ್ನಿಯ ಮಿಶ್ರ ತಂಡ ವಿಭಾಗಗಳಲ್ಲಿ ಪಾರಮ್ಯ ಮೆರೆದರು. ಏರ್‌ಪಿಸ್ತೂಲ್‌ ಮತ್ತು ರೈಫಲ್ ಸ್ಪರ್ಧೆಗಳಲ್ಲಿ ಸೋಮವಾರ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.

ಭಾರತದ ಆರ್‌. ನರ್ಮದಾ ಹಾಗೂ ಹಾಲಿ ವಿಶ್ವ ಚಾಂಪಿಯನ್‌ ರುದ್ರಾಕ್ಷ್‌ ಬಾಳಾಸಾಹೇಬ್ ಪಾಟೀಲ ಜೊತೆಗೂಡಿ 10 ಮೀಟರ್ಸ್ ಏರ್ ರೈಫಲ್‌ ಸ್ಪರ್ಧೆಯ ಫೈನಲ್‌ನಲ್ಲಿ 16–6ರಿಂದ ಹಂಗರಿಯ ಈಸ್ಟರ್ ಡೆನೆಸ್‌ ಮತ್ತು ಈಸ್ತವಾನ್ ಪೆನಿ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು.

ಜರ್ಮನಿಯ ಲಿಸಾ ಮುಲ್ಲರ್ ಮತ್ತು ಮ್ಯಾಕ್ಸಿಮಿಲಾನ್ ಡಲ್ಲಿಂಜರ್ ಮೂರನೇ ಸ್ಥಾನ ಗಳಿಸಿದರು.

10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಇನ್ನೊಂದು ಜೋಡಿ ತಿಲೊತ್ತಮಾ ಸೇನ್–ಹೃದಯ್ ಹಜಾರಿಕಾ ಏಳನೇ ಸ್ಥಾನ ಗಳಿಸಿತು.

10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯ ಫೈನಲ್‌ನಲ್ಲಿ ಭಾರತದ ವರುಣ್ ತೋಮರ್– ರಿಧಮ್ ಸಂಗ್ವಾನ್‌ 16–10ರಿಂದ ಸರ್ಬಿಯಾದ ಜೊರಾನಾ ಅರುನೊವಿಚ್‌– ಡಾಮಿರ್ ಮಿಕೆಚ್‌ ಅವರನ್ನು ಸೋಲಿಸಿ ಚಿನ್ನ ಜಯಿಸಿದರು. ಜರ್ಮನಿಯ ಸ್ಯಾಂಡ್ರಾ ರಿಟ್ಜ್‌– ರಾಬಿನ್ ವಾಲ್ಟರ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಈ ವಿಭಾಗದ ಸ್ಪರ್ಧೆಯಲ್ಲಿದ್ದ ಭಾರತದ ದಿವ್ಯಾ ಟಿ.ಎಸ್‌.– ಸರಬ್ಜೋತ್ ಸಿಂಗ್‌ ಐದನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT