ಮನ್‌ಪ್ರೀತ್‌ಗೆ ನಾಲ್ಕು ವರ್ಷ ನಿಷೇಧ

ಮಂಗಳವಾರ, ಏಪ್ರಿಲ್ 23, 2019
31 °C
ಉದ್ದೀಪನ ಮದ್ದು ಸೇವನೆ ಸಾಬೀತು

ಮನ್‌ಪ್ರೀತ್‌ಗೆ ನಾಲ್ಕು ವರ್ಷ ನಿಷೇಧ

Published:
Updated:
Prajavani

ನವದೆಹಲಿ: ಏಷ್ಯನ್‌ ಅಥ್ಲೆಟಿಕ್ಸ್‌ನ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದ ಮನ್‌ಪ್ರೀತ್‌ ಕೌರ್‌ ಅವರು ಉದ್ದೀಪನ ಮದ್ದು ಸೇವಿಸಿರುವುದು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (ನಾಡಾ) ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಕಾರಣದಿಂದ ಅವರಿಗೆ ನಾಲ್ಕು ವರ್ಷ ನಿಷೇಧ ಹೇರಲಾಗಿದೆ. 

2017ರ ಜುಲೈ 20ರಿಂದಲೇ ನಿಷೇಧ ಅನ್ವಯವಾಗಲಿದೆ ಎಂದು ಉದ್ದೀಪನ ತಡೆ ಶಿಸ್ತು ಘಟಕ (ಎಡಿಪಿಪಿ) ಆದೇಶದಲ್ಲಿ ತಿಳಿಸಲಾಗಿದೆ.

‘ಮನ್‌ಪ್ರೀತ್‌ ಅವರನ್ನು ನಾಲ್ಕು ವರ್ಷಗಳ ಕಾಲ ನಿಷೇಧಿಸಲಾಗಿದೆ’ ಎಂದು ನಾಡಾ ನಿರ್ದೇಶಕ ನವೀನ್‌ ಅಗರವಾಲ್‌ ತಿಳಿಸಿದ್ದಾರೆ. ನಿಷೇಧವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕೌರ್‌ ಅವರಿಗೆ ಅವಕಾಶ ನೀಡಲಾಗಿದೆ.

ಮನ್‌ಪ್ರೀತ್‌ ಅವರು ಭುವನೇಶ್ವರದಲ್ಲಿ 2017ರಲ್ಲಿ ನಡೆದಿದ್ದ ಏಷ್ಯನ್‌ ಅಥ್ಲೆಟಿಕ್ಸ್‌ನ ಚಿನ್ನದ ಪದಕ,  ಗುಂಟೂರಿನಲ್ಲಿ ನಡೆದಿದ್ದ ಅಂತರರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಜಿನ್‌ಹುವಾದಲ್ಲಿ 18.86ಮೀಟರ್ಸ್‌ ಕಬ್ಬಿಣದ ಗುಂಡು ಎಸೆದು ರಾಷ್ಟ್ರೀಯ ದಾಖಲೆ ಬರೆದಿದ್ದರು. ನಿಷೇಧದಿಂದ ಪದಕ ಹಾಗೂ ದಾಖಲೆಯನ್ನು ಕಳೆದು
ಕೊಂಡಿದ್ದಾರೆ.

ಹೋದ ವರ್ಷ ಜೂನ್ 1 ರಿಂದ 4 ರವರೆಗೆ ಪಟಿಯಾಲದಲ್ಲಿ ನಡೆದಿದ್ದ ಫೆಡರೇಷನ್ ಕಪ್ ರಾಷ್ಟ್ರೀಯ ಚಾಂಪಿಯನ್‌ಷಿಪ್ ಸಂದರ್ಭದಲ್ಲಿ 21 ವರ್ಷದ ಮನ್‌ಪ್ರೀತ್ ಅವರಿಂದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ)ವು ಮೂತ್ರದ ಮಾದರಿ ಸಂಗ್ರಹಿಸಿತ್ತು.

‘ಬಿ’ ಪರೀಕ್ಷೆಯ ನಂತರ ಅವರು ನಿಷೇಧಿತ ಡಿಮೆಥೈಲ್‌ಬುಟೈಲ್‌ಮೈನ್ ಸೇವಿಸಿರುವುದು ಸಾಬೀತಾಗಿತ್ತು. ಈ ಮದ್ದು ಸೇವಿಸಿ ಸಿಕ್ಕಿಬಿದ್ದಿರುವ ಮೊದಲ ಅಥ್ಲೀಟ್ ಮನ್‌ಪ್ರಿತ್ ಆಗಿದ್ದಾರೆ. ಮೆಥೈಲೆಕ್ಸ್‌ನೈಮನ್ ಮಾದರಿಯ ಮದ್ದು ಇದಾಗಿದೆ. ಮೆಥೈಲೆಕ್ಸ್‌ನೈಮನ್ ಮದ್ದು 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬಳಕೆಯಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !