ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನಾ ಮದ್ದು ಸೇವಿನೆ: ನವೀನ್‌ ನಾಲ್ಕು ವರ್ಷ ಅಮಾನತು

Last Updated 28 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿರುವ ಕಾರಣ ಭಾರತದ ಶಾಟ್‌ಪಟ್‌ ಸ್ಪರ್ಧಿ ನವೀನ್‌ ಚಿಕಾರ ಅವರನ್ನು ನಾಲ್ಕು ವರ್ಷ ಅಮಾನತು ಮಾಡಲಾಗಿದೆ.

ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌ಗಳ ಸಂಸ್ಥೆಯ (ಐಎಎಎಫ್‌) ಅಧೀನದಲ್ಲಿ ಬರುವ ಅಥ್ಲೆಟಿಕ್ಸ್‌ ಇಂಟಿಗ್ರಿಟಿ ಯೂನಿಟ್‌ (ಎಐಯು) ಶುಕ್ರವಾರ ಈ ಆದೇಶ ಹೊರಡಿಸಿದೆ.

‘2018ರ ಜುಲೈ 27ರಂದು ನವೀನ್ ಅವರಿಂದ ಮೂತ್ರದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. 2018ರ ಅಕ್ಟೋಬರ್‌ 28ರಂದು ಹೊರಬಿದ್ದ ಪರೀಕ್ಷಾ ವರದಿಯಲ್ಲಿ ನಿಷೇಧಿತ ಮದ್ದಿನ ಅಂಶ ಇರುವುದು ದೃಢಪಟ್ಟಿತ್ತು. ಹೀಗಾಗಿ ನವೀನ್‌ ಅವರನ್ನು ಅಮಾನತು ಮಾಡಲಾಗಿದೆ. ಮಾದರಿ ಸಂಗ್ರಹಿಸಿದ ದಿನದಿಂದಲೇ ಅಮಾನತು ಶಿಕ್ಷೆ ಜಾರಿಯಾಗಲಿದೆ’ ಎಂದು ಎಐಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಐಎಎಎಫ್‌ ನಿಷೇಧಿಸಿರುವ ಮದ್ದುಗಳ ಪಟ್ಟಿಯಲ್ಲಿಜಿಎಚ್‌ಆರ್‌ಪಿ–6 ಕೂಡ ಸೇರಿದೆ ಎಂಬುದು ತಿಳಿದಿರಲಿಲ್ಲ. ಎಐಯು ತೆಗೆದುಕೊಂಡಿರುವ ಕ್ರಮಕ್ಕೆ ನನ್ನ ಸಹಮತವಿದೆ. ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ ಎಂದು 2018ರ ಡಿಸೆಂಬರ್‌ನಲ್ಲೇ ನವೀನ್‌ ತಿಳಿಸಿದ್ದಾರೆ’ ಎಂದು ಎಐಯು ಹೇಳಿದೆ.

23 ವರ್ಷ ವಯಸ್ಸಿನ ಚಿಕಾರ, 2018ರಲ್ಲಿ ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು. ಅದೇ ವರ್ಷ ನಡೆದಿದ್ದ ಅಂತರ ರಾಜ್ಯ ಚಾಂಪಿಯನ್‌ಷಿಪ್‌ನಲ್ಲೂ ಬೆಳ್ಳಿಯ ಪದಕ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT