ಈಜು ಚಾಂಪಿಯನ್‌ಷಿಪ್‌: ರಾಜ್ಯದ ಶ್ರೀಹರಿ ಕೂಟ ದಾಖಲೆ

7
ರಾಷ್ಟ್ರೀಯ ಸಬ್‌ ಜೂನಿಯರ್‌ ಮತ್ತು ಜೂನಿಯರ್‌ ಈಜು ಚಾಂಪಿಯನ್‌ಷಿಪ್‌

ಈಜು ಚಾಂಪಿಯನ್‌ಷಿಪ್‌: ರಾಜ್ಯದ ಶ್ರೀಹರಿ ಕೂಟ ದಾಖಲೆ

Published:
Updated:
ವಿದಿತ್‌ ಎಸ್‌. ಶಂಕರ್‌

ಪುಣೆ: ಕರ್ನಾಟಕದ ಶ್ರೀಹರಿ ನಟರಾಜ್‌ ಅವರು ರಾಷ್ಟ್ರೀಯ ಸಬ್‌ ಜೂನಿಯರ್‌ ಮತ್ತು ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಗುರುವಾರ ನಡೆದ ಬಾಲಕರ ವಿಭಾಗದ ಗುಂಪು–1ರ 200 ಮೀಟರ್ಸ್‌ ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಶ್ರೀಹರಿ 1 ನಿಮಿಷ 53.54 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಇದರೊಂದಿಗೆ 2008ರಲ್ಲಿ ಅಮೃತಸರದಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ವೀರ್‌ಧವಳ್‌ ಖಾಡೆ (1ನಿ,54.90ಸೆ.) ನಿರ್ಮಿಸಿದ್ದ ದಾಖಲೆ ಅಳಿಸಿ ಹಾಕಿದರು.

ಕರ್ನಾಟಕದ ಮತ್ತೊಬ್ಬ ಸ್ಪರ್ಧಿ ಸಿ.ಜೆ. ಸಂಜಯ್‌ ಈ ವಿಭಾಗದ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಅವರು 1 ನಿಮಿಷ 56.13 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಸಲೋನಿಗೆ ಚಿನ್ನ: ಬಾಲಕಿಯರ ವಿಭಾಗದ ಗುಂಪು–1ರ 200 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯ ಚಿನ್ನ ಕರ್ನಾಟಕದ ಸಲೋನಿ ದಲಾಲ್‌ ಅವರ ಪಾಲಾಯಿತು.

ಸಲೋನಿ ಅವರು 2 ನಿಮಿಷ 48.72 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು. ಹರ್ಷಿತಾ ಜಯರಾಮ್‌ (2ನಿ,49.19ಸೆ.) ಬೆಳ್ಳಿ ತಮ್ಮದಾಗಿಸಿಕೊಂಡರು.

ಬಾಲಕರ ವಿಭಾಗದ ಗುಂಪು–3ರ 100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಕರ್ನಾಟಕದ ವಿದಿತ್‌ ಎಸ್‌.ಶಂಕರ್‌ ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ವಿದಿತ್‌ ಅವರು 1 ನಿಮಿಷ 14.51 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಕರ್ನಾಟಕದ ಫಲಿತಾಂಶಗಳು: ಬಾಲಕರು, ಗುಂಪು–1: 200 ಮೀ.ಫ್ರೀಸ್ಟೈಲ್‌: ಶ್ರೀಹರಿ ನಟರಾಜ್‌ (1ನಿ,53.54ಸೆ.)–1, ಸಿ.ಜೆ.ಸಂಜಯ್‌ (1ನಿ, 56.13ಸೆ.)–3. 200 ಮೀ. ಬಟರ್‌ಫ್ಲೈ: ತನೀಷ್‌ ಜಾರ್ಜ್‌ ಮ್ಯಾಥ್ಯೂ (2ನಿ,06.73ಸೆ.)–1, ಸಿ.ಜೆ. ಸಂಜಯ್‌ (2ನಿ,11.12ಸೆ.)–3.

ಗುಂಪು–2: 200 ಮೀ.ಫ್ರೀಸ್ಟೈಲ್‌: ಕಪಿಲ್‌ ಡಿ ಶೆಟ್ಟಿ (2ನಿ, 03.42ಸೆ.)–6.

ಗುಂಪು–3: 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ವಿದಿತ್‌ ಎಸ್‌ ಶಂಕರ್‌ (1ನಿ,14.51ಸೆ.)–1.

ಗುಂಪು–4: 50 ಮೀ. ಬ್ಯಾಕ್‌ಸ್ಟ್ರೋಕ್‌: ತನಯ್‌ ಸುರೇಶ್‌ (36.28ಸೆ.)–3, ರೇಣುಕಾಚಾರ್ಯ (37.18ಸೆ.)–5.

ಬಾಲಕಿಯರು: ಗುಂಪು–1: 200 ಮೀ. ಬ್ರೆಸ್ಟ್‌ಸ್ಟ್ರೋಕ್‌: ಸಲೋನಿ ದಲಾಲ್‌ (2ನಿ,48.72ಸೆ.)–1, ಹರ್ಷಿತಾ ಜಯರಾಮ್‌ (2ನಿ,49.19ಸೆ.)–2. 50 ಮೀ. ಬ್ಯಾಕ್‌ಸ್ಟ್ರೋಕ್‌: ಸುವನಾ ಸಿ.ಭಾಸ್ಕರ್‌ (31.28ಸೆ.)–1. 800 ಮೀ.ಫ್ರೀಸ್ಟೈಲ್‌: ಖುಷಿ ದಿನೇಶ್‌ (9ನಿ,25.67ಸೆ.)–1, ಸಿದ್ಧಿ ಜಾಡೆ (10ನಿ,18.47ಸೆ.)–4.

ಗುಂಪು–2: 1500 ಮೀ. ಫ್ರೀಸ್ಟೈಲ್‌: ದಿವ್ಯಾ ಘೋಷ್‌ (19ನಿ,52.47ಸೆ.)–6, ಸಮನ್ವಿತಾ ರವಿಕುಮಾರ್‌ (19.57.30ಸೆ.)–7. 200 ಮೀ.ಬ್ರೆಸ್ಟ್‌ಸ್ಟ್ರೋಕ್‌: ರಚನಾ ಎಸ್‌.ಆರ್‌.ರಾವ್‌ (2ನಿ,48.06ಸೆ.)–3, ಸಾನ್ವಿ ಎಸ್‌. ರಾವ್‌ (2ನಿ,48.54ಸೆ.)–4. 50 ಮೀ. ಬಟರ್‌ಫ್ಲೈ: ನೀನಾ ವೆಂಕಟೇಶ್‌ (29.48ಸೆ.)–1. 50 ಮೀ. ಬ್ಯಾಕ್‌ಸ್ಟ್ರೋಕ್‌: ನೀನಾ ವೆಂಕಟೇಶ್‌ (31.83ಸೆ.)–1, ಸಾನಿಯಾ ಡಿಸೋಜ ಜೆಸ್ಲಿನ್‌ (33.33ಸೆ.)–4.

ಗುಂಪು–3: 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ವಿ.ಹಿತೈಷಿ (1ನಿ,22.13ಸೆ.)–1, ದಾತ್ರಿ ದರ್ಶನ್‌ (1ನಿ,28.89ಸೆ.)–8.

ಗುಂಪು–4: 50 ಮೀ. ಬ್ಯಾಕ್‌ಸ್ಟ್ರೋಕ್‌: ಮಾನವಿ ವರ್ಮಾ (37.74ಸೆ.)–2, ರಿಜುಲ್‌ ಪಾಟೀಲ (38.69ಸೆ.)–4.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !