ಮಂಗಳವಾರ, ಸೆಪ್ಟೆಂಬರ್ 21, 2021
26 °C
ಸೋನಿಯಾ ಚಾಹಲ್ ಹೆಸರನ್ನೂ ಅಂತಿಮಗೊಳಿಸಿದ ಬಿಎಫ್ಐ

ಬಾಕ್ಸಿಂಗ್‌:ಅರ್ಜುನ ಪುರಸ್ಕಾರಕ್ಕೆ ಗೌರವ್, ಸಿಮ್ರನ್‌ಜೀತ್ ಕೌರ್‌ ಹೆಸರು ಶಿಫಾರಸು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಿಮ್ರನ್‌ಜೀತ್ ಕೌರ್, ಗೌರವ್ ಸೋಳಂಕಿ ಮತ್ತು ಸೋನಿಯಾ ಚಾಹಲ್ ಅವರನ್ನು ಭಾರತ ಬಾಕ್ಸಿಂಗ್ ಫೆಡರೇಷನ್‌ (ಬಿಎಫ್‌ಐ) ಈ ವರ್ಷದ ಅರ್ಜುನ ಪುರಸ್ಕಾರಕ್ಕೆ ಶಿಫಾರಸು ಮಾಡಿದೆ.

ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿರುವ ಸಿಮ್ರನ್‌ಜೀತ್ (ಮಹಿಳೆಯರ 60 ಕೆಜಿ ವಿಭಾಗ), 2018ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದುಕೊಂಡಿದ್ದರು.

ಪುರುಷರ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಗೌರವ್‌, 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಅದೇ ವರ್ಷ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸೋನಿಯಾ ಚಾಹಲ್ (ಮಹಿಳೆಯರ 57 ಕೆಜಿ ವಿಭಾಗ) ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.

‘ಬಾಕ್ಸರ್‌ಗಳ ಈ ಹಿಂದಿನ ನಾಲ್ಕು ವರ್ಷಗಳ ಸಾಮರ್ಥ್ಯವನ್ನು ಆಧರಿಸಿ ಮೂವರ ಹೆಸರುಗಳನ್ನು ಪ್ರಶಸ್ತಿಗೆ ಅಂತಿಮಗೊಳಿಸಲಾಗಿದೆ‘ ಎಂದು ಬಿಎಫ್‌ಐ ಪ್ರಧಾನ ಕಾರ್ಯದರ್ಶಿ ಹೇಮಂತ್ ಕಲಿಟಾ ಹೇಳಿದ್ದಾರೆ.

ಮಹಿಳಾ ತಂಡದ ಸಹಾಯಕ ಕೋಚ್‌ ಸಂಧ್ಯಾ ಗುರುಂಗ್‌, ರಾಷ್ಟ್ರೀಯ ಯುವ ತಂಡದ ಮುಖ್ಯ ಕೋಚ್‌ ಭಾಸ್ಕರ ಭಟ್ಟ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು