ಶನಿವಾರ, ಆಗಸ್ಟ್ 13, 2022
27 °C

ಥಾಮಸ್ ಮತ್ತು ಉಬರ್ ಕಪ್‌: ಕಣಕ್ಕಿಳಿಯಲಿರುವ ಸಿಂಧು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂದಿನ ತಿಂಗಳಲ್ಲಿ ನಡೆಯಲಿರುವ ಥಾಮಸ್ ಮತ್ತು ಉಬರ್ ಕಪ್ ಟೂರ್ನಿಯಲ್ಲಿ ಆಡಲು ಭಾರತದ ಪಿ.ವಿ.ಸಿಂಧು ಒಪ್ಪಿಕೊಂಡಿದ್ದಾರೆ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಹಿಮಾಂತ ವಿಶ್ವ ಶರ್ಮಾ ಸೋಮವಾರ ತಿಳಿಸಿದ್ದಾರೆ.

ಕುಟುಂಬದಲ್ಲಿ ಪ್ರಮುಖ ಕಾರ್ಯಗಳು ನಡೆಯಲಿರುವುದರಿಂದ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಈ ಹಿಂದೆ ಸಿಂಧು ತಿಳಿಸಿದ್ದರು. ಆದರೆ ಈಗ, ಕಾರ್ಯಕ್ರಮಗಳನ್ನು ಸ್ವಲ್ಪ ಬೇಗ ನಡೆಸಿ ಟೂರ್ನಿಗೆ ಸಿದ್ಧಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಶರ್ಮಾ ವಿವರಿಸಿದ್ದಾರೆ.

ಭಾರತ ಮಹಿಳಾ ತಂಡವು ’ಡಿ‘ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದ್ದು ಜರ್ಮನಿ, ಫ್ರಾನ್ಸ್ ಮತ್ತು 14 ಬಾರಿಯ ಚಾಂಪಿಯನ್ ಚೀನಾ ಇದೇ ಗುಂಪಿನಲ್ಲಿದೆ. ಪುರುಷರ ತಂಡವು ’ಸಿ’ ಗುಂಪಿನಲ್ಲಿದ್ದು ಜರ್ಮನಿ, ಅಲ್ಜೀರಿಯಾ ಮತ್ತು 2016ರ ಚಾಂಪಿಯನ್, ಆತಿಥೇಯ ಡೆನ್ಮಾರ್ಕ್ ವಿರುದ್ಧ ಸೆಣಸಲಿದೆ. ಎರಡೂ ತಂಡಗಳಿಗೆ ಐದನೇ ಶ್ರೇಯಾಂಕ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.