ಭಾನುವಾರ, ಜೂಲೈ 5, 2020
27 °C

‘ನಾನು ಬ್ಯಾಡ್ಮಿಂಟನ್’ಗೆ ಸಿಂಧು ರಾಯಭಾರಿ‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ಹಮ್ಮಿಕೊಂಡಿರುವ ‘ಐಯಾಮ್ ಬ್ಯಾಡ್ಮಿಂಟನ್‌’ ಎಂಬ ಅರಿವು ಕಾರ್ಯಕ್ರಮಕ್ಕೆ ಭಾರತದ ಪಿ.ವಿ.ಸಿಂಧು ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. 

ಕಳಂಕರಹಿತ ಆಟದಲ್ಲಿ ತೊಡಗಿಸಿಕೊಳ್ಳುವಂತೆ ಆಟಗಾರರನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶ. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ‘ಯಾವುದೇ ಕ್ರೀಡೆಯಲ್ಲಿ ಕಳಂಕವಿಲ್ಲದೆ ಆಡುವುದು ಮುಖ್ಯವಾಗಿದ್ದು ಈ ಸಂದೇಶಕ್ಕೆ ನಾವು–ರಾಯಭಾರಿಗಳೆಲ್ಲರೂ ದನಿಗೂಡಿಸುತ್ತಿದ್ದೇವೆ’ ಎಂದು ಹೇಳಿದರು.

ಬಿಡಬ್ಲ್ಯುಎಫ್ ಐದು ವರ್ಷಗಳ ಹಿಂದೆ ನೀತಿ ಘಟಕವನ್ನು ಸ್ಥಾಪಿಸಿತ್ತು. ಅದರ ಧ್ಯೇಯಗಳನ್ನು ಆಟಗಾರರಿಗೆ ತಲುಪಿಸಲು ಈ ಬಾರಿ ಟೊಂಕಕಟ್ಟಿ ನಿಂತಿದ್ದು ಅದಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  

ಕೆನಡಾದ ಮೈಕೆಲಿ ಲೀ, ಚೀನಾದ ಜೆಂಗ್ ಶೀ ವೀ, ಹ್ವಾಂಗ್ ಯಾ ಕ್ವಾಂಗ್, ಇಂಗ್ಲೆಂಡ್‌ನ ಜ್ಯಾಕ್ ಶೆಫರ್ಡ್‌, ಜರ್ಮನಿಯ ವಲೆಸ್ಕಾ ನೊಬ್ಲಾಚ್, ಮಾರ್ಕ್ ಜೆಬ್ಲೆರ್ ಹಾಗೂ ಹಾಂಗ್‌ಕಾಂಗ್‌ನ ಚಾನ್ ಹೋ ಯೆನ್ ಕೂಡ ರಾಯಭಾರಿ ಆಗಿದ್ದಾರೆ. ಬಿಡಬ್ಲ್ಯುಎಫ್ ಮುಖ್ಯಸ್ಥ ಪಾಲ್ ಎರಿಕ್ ಹೋಯೆರ್‌, ಬಿಡಬ್ಲ್ಯುಎಫ್ ಪ್ಯಾರಾ ಬ್ಯಾಡ್ಮಿಂಟನ್ ಅಥ್ಲೀಟ್ಸ್ ಕಮಿಷನರ್ ರಿಚರ್ಡ್ ಪೆರೋಟ್‌, ಸೈನಾ ನೆಹ್ವಾಲ್‌, ವಿಕ್ಟರ್ ಅಕ್ಸೆಲ್ಸನ್, ಹೇಂದ್ರ ಸತ್ಯವಾನ್, ಕ್ರಿಸ್ಟಿನಾ ಪೆಡರ್ಸನ್, ಚೆನ್ ಲಾಂಗ್, ಮಿಸಾಕಿ ಮಸುಟೊಮೊ ಮತ್ತು ಅಕಾಯ ಟಕಹಾಶಿ 2016ರಿಂದ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು