ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಅಕಾನೆಗೆ ಮಣಿದ ಸಿಂಧು

Last Updated 20 ನವೆಂಬರ್ 2021, 10:41 IST
ಅಕ್ಷರ ಗಾತ್ರ

ಇಂಡೊನೇಷ್ಯಾ: ಜಪಾನ್‌ನ ಅಕಾನೆ ಯಾಮಗುಚಿ ಎದುರು ಸುಲಭವಾಗಿ ಸೋಲನ್ನಪ್ಪಿದ ಭಾರತದ ಪಿ.ವಿ.ಸಿಂಧು ಅವರ ಅಭಿಯಾನ ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಅಂತ್ಯವಾಯಿತು.

ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು 13-21, 9-21ರಿಂದ ಅಕಾನೆ ಎದುರು ಮುಗ್ಗರಿಸಿದರು. ಕೇವಲ 32 ನಿಮಿಷಗಳಲ್ಲಿ ಹಣಾಹಣಿ ಕೊನೆಗೊಂಡಿತು.

ವಿಶ್ವ ಚಾಂಪಿಯನ್ ಸಿಂಧು ಈ ಹಿಂದೆ ಜಪಾನ್ ಆಟಗಾರ್ತಿ ಎದುರು ಆಡಿದ 19 ಪಂದ್ಯಗಳಲ್ಲಿ 12ರಲ್ಲಿ ಜಯ ಸಾಧಿಸಿದ್ದರು. ಅಲ್ಲದೆ ಈ ವರ್ಷ ಕಣಕ್ಕಿಳಿದ ಎರಡೂ ಪಂದ್ಯಗಳಲ್ಲಿ ಭಾರತದ ಆಟಗಾರ್ತಿಗೆ ಜಯ ಒಲಿದಿತ್ತು. ಆದರೆ ಈ ಸೆಣಸಾಟದಲ್ಲಿ ಅಕಾನೆ ಸವಾಲು ಮೀರಲು ಸಿಂಧು ಅವರಿಗೆ ಸಾಧ್ಯವಾಗಲಿಲ್ಲ.

ಎರಡೂ ಗೇಮ್‌ಗಳ ಆರಂಭದಿಂದಲೇ ಮೂರನೇ ಶ್ರೇಯಾಂಕದ ಸಿಂಧು ಹಿನ್ನಡೆ ಅನುಭವಿಸಿದರು. ಅಲ್ಲದೆ ತಮ್ಮ ಶ್ರೇಷ್ಠ ಸಾಮರ್ಥ್ಯ ತೋರಲು ಅವರಿಗೆ ಸಾಧ್ಯವಾಗಲಿಲ್ಲ. ಎರಡನೇ ಗೇಮ್‌ನಲ್ಲಿ ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು.

ಜಪಾನ್‌ ಆಟಗಾರ್ತಿಯು ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ, ಕೊರಿಯಾ ಆಟಗಾರ್ತಿ ಆ್ಯನ್‌ ಸೆಯುಂಗ್ ಮತ್ತು ಥಾಯ್ಲೆಂಡ್‌ನ ಫಿಟ್ಟಾಯಪಾರ್ನ್‌ ಚೈವಾನ್‌ ನಡುವಣ ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT