ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈಟ್ ಸೆನ್ಸಿಯಾ’ ತಾಂತ್ರಿಕ ಉತ್ಸವಕ್ಕೆ ತೆರೆ

Last Updated 31 ಮಾರ್ಚ್ 2018, 10:25 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಎಂಜಿನಿಯರಿಂಗ್ (ಎಂಐಟಿಇ) ನ ವಾರ್ಷಿಕ ರಾಜ್ಯ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ, ತಾಂತ್ರಿಕ ಮತ್ತು ಉದ್ಯಮಾಡಳಿತ ಉತ್ಸವ ಮೈಟ್‌ ಸೆನ್ಸಿಯಾ 11 ನೇ ಆವೃತ್ತಿಯು ಗುರುವಾರ ಸಂಜೆ ಮುಕ್ತಾಯಗೊಂಡಿತು.

ಎರಡು ದಿನ ನಡೆದ 63 ಸ್ಪರ್ಧೆಗಳಲ್ಲಿ ರಾಜ್ಯದ 48 ವಿವಿಧ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜುಗಳ 1,850 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಚಾಂಪಿಯನ್ಸ್ ವಿಜೇತ ತಂಡಕ್ಕೆ ಚೆಕ್ ಜತೆಗೆ ವಿಜೇತರ ಟ್ರೋಫಿಯನ್ನು ನೀಡಲಾಯಿತು.

ಎಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟಾರೆ ಚಾಂಪಿಯನ್‌ಷಿಪ್‌ ಆಗಿ ಹೊರಹೊಮ್ಮಿದ ನಿಟ್ಟೆ ಎನ್‌ಎಂಎಎಂಐಟಿ ತಂಡ, ಟ್ರೋಫಿಯೊಂದಿಗೆ ₹25 ಸಾವಿರ ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಪಡೆದ ವಾಮಂಜೂರಿನ ಸೇಂಟ್‌ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ತಂಡ ₹20 ಸಾವಿರ ನಗದು, ಟ್ರೋಫಿ ಗೆದ್ದುಕೊಂಡವು.

ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಲ್ಲಿ ಚಾಂಪಿಯನ್ ಆದ ನಗರದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ತಂಡವು ₹10 ಸಾವಿರ ನಗದು, ಟ್ರೋಫಿ ಹಾಗೂ ರನ್ನರ್‌ ಅಪ್ ಪ್ರಶಸ್ತಿ ಪಡೆದ ನಗರದ ಸಹ್ಯಾದ್ರಿ ಕಾಲೇಜು ₹8 ಸಾವಿರ ನಗದು ಬಹುಮಾನ ಪಡೆದವು.

ಅಂತಿಮ ಪ್ರಶಸ್ತಿ ವಿತರಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ರಾಜೇಶ್ ಚೌಟ ಅವರು, ಕಾರ್ಯಕ್ರಮವನ್ನು ಸತತವಾಗಿ ನಡೆಸಿಕೊಂಡು ಬರುತ್ತಿದ್ದು, ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT