ಸ್ನೇಹಾಗೆ ಸಿಹಿ–ಕಹಿ; ಜಾಯ್ಲಿನ್‌ಗೆ ನಿರಾಸೆ?

5

ಸ್ನೇಹಾಗೆ ಸಿಹಿ–ಕಹಿ; ಜಾಯ್ಲಿನ್‌ಗೆ ನಿರಾಸೆ?

Published:
Updated:
ಸ್ನೇಹಾ ಪಿ.ಜೆ

ಬೆಂಗಳೂರು: ಕೂಟದಲ್ಲಿ ಅವಕಾಶ ಗಳಿಸುವ ಬಗ್ಗೆ ಆತಂಕದಲ್ಲಿದ್ದ ರಾಜ್ಯದ ಇಬ್ಬರು ಅಥ್ಲೀಟ್‌ಗಳ ಪೈಕಿ ಸ್ನೇಹಾ ಪಿ.ಜೆ ಅವರಿಗೆ ಸಿಹಿ ಮತ್ತು ಕಹಿ ಫಲ ಲಭಿಸಿದ್ದು ಜಾಯ್ಲಿನ್‌ ಭವಿಷ್ಯ ಅತಂತ್ರವಾಗಿದೆ.

ಸ್ಪ್ರಿಂಟರ್‌ ಸ್ನೇಹಾ ಅವರಿಗೆ 100 ಮೀಟರ್ಸ್‌ ಓಟದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು 200 ಮೀಟರ್ಸ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಜಾಯ್ಲಿನ್ ವಿಷಯದಲ್ಲಿ ಸೋಮವಾರ ರಾತ್ರಿ ವರೆಗೂ ನಿರ್ಧಾರ ಹೊರಬೀಳಲಿಲ್ಲ.

ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಡೊಂಡಿದ್ದರೂ ಕೂಟದಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂದು ಜಾಯ್ಲಿನ್ ಮತ್ತು ಸ್ನೇಹಾ ಆರೋಪಿಸಿದ್ದರು. ಇವರಿಬ್ಬರ ಹೆಸರು ಬಿಟ್ಟುಹೋಗಿರುವುದು ಗೊತ್ತೇ ಆಗಲಿಲ್ಲ ಎಂದು ಹೇಳಿದ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಗೌರವ ಕಾರ್ಯದರ್ಶಿ ರಾಜವೇಲು ‘ಅವಕಾಶ ನೀಡಲು ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದ್ದರು. ಹೀಗಾಗಿ ಇಬ್ಬರೂ ಗುವಾಹಟಿಗೆ ತೆರಳಿದ್ದರು.

ಆದರೆ ಸೋಮವಾರ ಸಂಜೆ ವರೆಗೂ ಅಥ್ಲೀಟ್‌ಗಳಿಗೆ ಸರಿಯಾದ ಮಾಹಿತಿ ಸಿಗಲಿಲ್ಲ. ಸ್ನೇಹಾಗೆ ಒಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರುವ ವಿಷಯ ರಾತ್ರಿ ತಿಳಿಸಲಾಗಿದೆ ಎಂದು ಅವರ ಕೋಚ್‌ ಯತೀಶ್ ಕುಮಾರ್ ಹೇಳಿದರು. ‘ನನಗೆ ಇನ್ನೂ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ’ ಎಂದು ಜಾಯ್ಲಿನ್ ತಿಳಿಸಿದರು.

‘ಜಾಯ್ಲಿನ್‌ ಅವರಿಗೆ ಅವಕಾಶ ದೊರಕಿಸಿಕೊಡಲು ಸತತ ಪ್ರಯತ್ನ ನಡೆಯುತ್ತಿದೆ. ಅವರ ಸ್ಪರ್ಧೆಗೆ ಇನ್ನೂ ಎರಡು ದಿನ ಇರುವುದರಿಂದ ಭರವಸೆಯಲ್ಲಿದ್ದೇವೆ’ ಎಂದು ರಾಜವೇಲು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !