ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚರಿ ಮೂಡಿಸಿದ ಬಾಲಕಿಯರ ಹಾಸ್ಟೆಲ್‌!

Last Updated 3 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ರಾಯಚೂರು: ನಗರದ ವಿವಿಧ ಹಾಸ್ಟೆಲ್‌ಗಳು ಮತ್ತು ಅಂಗನವಾಡಿ ಕೇಂದ್ರಗಳ ಪರಿಶೀಲನೆಗೆ ಪೂರ್ವ ಮುನ್ಸೂಚನೆ ನೀಡದೆ ರಾಜ್ಯ ಉಪಲೋಕಾಯುಕ್ತ ಎನ್‌. ಆನಂದ್‌ ಅವರು ಇತ್ತೀಚೆಗೆ ಭೇಟಿ ಕೊಟ್ಟರು.

ಬೆಂಗಾವಲು ವಾಹನಗಳಲ್ಲಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಮಾಧ್ಯಮದವರಿಗೆ ಯಾವ ಹಾಸ್ಟೆಲ್‌ ಕಡೆಗೆ ಉಪಲೋಕಾಯುಕ್ತರ ವಾಹನ ಹೋಗುತ್ತಿದೆ ಎಂಬುದು ಕೊನೆಯ ಕ್ಷಣದವರೆಗೂ ಆ ದಿನ ಗೊತ್ತಾಗಲಿಲ್ಲ. ಹೀಗಾಗಿ ಬೆಂಗಾವಲು ವಾಹನಗಳೊಂದಿಗೆ ಮಾಧ್ಯಮದವರ ಬೈಕ್‌ಗಳೆಲ್ಲ ಅವರನ್ನು ಹಿಂಬಾಲಿಸಬೇಕಾಯಿತು.

ನಗರದ ದೇವರ ಕಾಲೊನಿಯ ಪರಿಶಿಷ್ಟ ಪಂಗಡಗಳ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದ ಎದುರು ವಾಹನಗಳೆಲ್ಲ ನಿಂತವು. ದಿಢೀರ್‌ ಅಧಿಕಾರಿಗಳ ತಂಡ ಬಂದಿರುವುದನ್ನು ಹಾಸ್ಟೆಲ್‌ ವಾರ್ಡನ್‌ ಹಾಗೂ ವಿದ್ಯಾರ್ಥಿನಿಯರು ನೋಡಿ ಅಚ್ಚರಿ ಆಗಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ, ಹಾಸ್ಟೆಲ್‌ ಪ್ರವೇಶದ್ವಾರದಲ್ಲಿ ಅಂದವಾಗಿ ರಂಗೋಲಿ ಹಾಕಿ, ಉದುಬತ್ತಿ ಹಚ್ಚಿಟ್ಟು ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಧಿಕಾರಿಗಳಿಗೂ ಗೊತ್ತಿರದ ಸುಳಿವು ಹಾಸ್ಟೆಲ್‌ ವಾರ್ಡನ್‌ಗೆ ಹೇಗೆ ಗೊತ್ತಾಯಿತು ಎಂದು ಭೇಟಿಗೆ ಹೋದವರೆಲ್ಲ ಅಚ್ಚರಿ ಪಡುವಂತಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT