ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟರ ಘಟ್ಟಕ್ಕೆ ಗೌರವ್ ಸೋಳಂಕಿ

ಬಾಸ್ಪೊರಸ್‌ ಬಾಕ್ಸಿಂಗ್ ಟೂರ್ನಿ: ಸೋನಿಯಾಗೆ ಜಯ
Last Updated 17 ಮಾರ್ಚ್ 2021, 12:29 IST
ಅಕ್ಷರ ಗಾತ್ರ

ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ, ಭಾರತದ ಬಾಕ್ಸರ್‌ ಗೌರವ್‌ ಸೋಳಂಕಿ ಅವರು ಬಾಸ್ಪೊರಸ್ ಬಾಕ್ಸಿಂಗ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಲಗ್ಗೆಯಿಟ್ಟಿದ್ದಾರೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯ 57 ಕೆಜಿ ವಿಭಾಗದ ಮೊದಲ ಸುತ್ತಿನ ಬೌಟ್‌ನಲ್ಲಿ ಅವರು 5–0ಯಿಂದ ಕಜಕಸ್ತಾನದ ಅರಪೊವ್‌ ಐದೊಸ್ ಅವರನ್ನು ಮಣಿಸಿದರು.

ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಸೋನಿಯಾ ಲಾಥರ್‌ (ಮಹಿಳೆಯರ 57 ಕೆಜಿ ವಿಭಾಗ) ಕೂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಹರಿಯಾಣದ ಸೋನಿಯಾ 5–0 ಅಂತರದಿಂದ ಅರ್ಜೆಂಟೀನಾದ ರೊಸಾರಿಯಾ ಮಿಲೊಗ್ರಾಸ್ ಅವರನ್ನು ಪರಾಭವಗೊಳಿಸಿದರು. ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಟರ್ಕಿಯ ಸುರ್ಮನೇಲಿ ತಕ್‌ಸೆನಾಜ್ ಎದುರು ಕಣಕ್ಕಿಳಿಯಲಿದ್ದಾರೆ.

ಮೊದಲ ದಿನ ಸ್ಪರ್ಧೆಯಲ್ಲಿದ್ದ ಭಾರತದ ಇನ್ನುಳಿದ ಬಾಕ್ಸರ್‌ಗಳು ನಿರಾಸೆ ಅನುಭವಿಸಿದರು. ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ನಮನ್ ತನ್ವರ್‌ (ಪುರುಷರ 91 ಕೆಜಿ) 1–4ರಿಂದ ಟರ್ಕಿಯ ಬ್ಯಾಕಿ ಯಾಲ್ಸಿನ್‌ ಮುಹಮ್ಮದ್ ಎದುರು, ಪಿ.ಎಲ್‌. ಪ್ರಸಾದ್‌ (52 ಕೆಜಿ) 0–5ರಿಂದ ಕಜಕಸ್ತಾನದ ಅಬ್ದಿಕ್‌ದಿರ್‌ ದಾಮಿರ್ ವಿರುದ್ಧ ಸೋಲು ಅನುಭವಿಸಿದರು.

75 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಪ್ರಯಾಗ್‌ ಚವ್ಹಾನ್‌ ಹಾಗೂ ಪೂಜಾ (ಮಹಿಳೆಯರ 75 ಕೆಜಿ) ಅವರೂ ಕ್ರಮವಾಗಿ ಅಜರ್‌ಬೈಜಾನ್‌ನ ಸಹಸುವರ್ಲಿ ಕರ್ಮನ್‌ ಹಾಗೂ ರಷ್ಯಾದ ಶಮೊನೊವಾ ಅನಸ್ತೇಸಿಯಾ ಎದುರು ಶರಣಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT