ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಅಧಿಬನ್‌ಗೆ ಪ್ರಶಸ್ತಿ

Last Updated 15 ಮಾರ್ಚ್ 2018, 20:46 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಭಾರತದ ಬಿ.ಅಧಿಬನ್‌ 33ನೇ ರೇಕ್ಜೊವಿಕ್‌ ಓಪನ್‌ ಚೆಸ್‌ ಟೂರ್ನಿಯಲ್ಲಿ ಗುರುವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಟೂರ್ನಿಯ ಆರಂಭದಿಂದಲೇ ಉತ್ತಮವಾಗಿ ಆಡಿದ ಅವರು ಒಂಬತ್ತು ಸುತ್ತುಗಳ ಪಂದ್ಯಗಳಲ್ಲಿ ಐದರಲ್ಲಿ ಗೆದ್ದರು. ಒಟ್ಟು 7.5 ಪಾಯಿಂಟ್ಸ್‌ಗಳು ಇವರ ಬಳಿ ಇವೆ. ಅಂತಿಮ ಸುತ್ತಿನಲ್ಲಿ ಅಧಿಬನ್‌ ಅವರು ಮುಸ್ತಫಾ ಯಿಲ್ಮಿಜ್‌ ಎದುರು ಡ್ರಾ ಮಾಡಿಕೊಂಡರು.

ಟೂರ್ನಿಯ ಆರಂಭಿಕ ಸುತ್ತುಗಳಲ್ಲಿ ಅಲೆಕ್ಸಾಂಡ್ರೊ ರಮೆರೆಜ್ ಮತ್ತು ಮ್ಯಾಕ್ಸಿಮ್‌ ಲಾಗ್ರೇವ್‌ ಅವರನ್ನು ಅಧಿಬನ್‌ ಮಣಿಸಿದ್ದಾರೆ. ತಮಿಳುನಾಡಿನ ಗ್ರ್ಯಾಂಡ್‌ಮಾಸ್ಟರ್‌ ಇಲ್ಲಿ ಪ್ರಶಸ್ತಿ ಗೆದ್ದ ಭಾರತದ ಎರಡನೇ ಸ್ಪರ್ಧಿ ಎನಿಸಿದ್ದಾರೆ. 2016ರಲ್ಲಿ ಅಭಿಜಿತ್ ಗುಪ್ತಾ ಇಲ್ಲಿ ಚಾಂಪಿಯನ್ ಆಗಿದ್ದರು.

‘ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರುವುದಕ್ಕೆ ಖುಷಿಯಾಗಿದೆ. ಎಂಟನೇ ಸುತ್ತಿನಲ್ಲಿ ರಿಚರ್ಡ್‌ ರಾಪೊರ್ಟ್‌ ಎದುರು ಜಯಗಳಿಸಿದ್ದು ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು’ ಎಂದು ಅಧಿಬನ್‌ ಸಂತಸ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT