ದಕ್ಷಿಣ ಏಷ್ಯಾ ಕ್ರೀಡಾಕೂಟ: ನಾಲ್ಕು ಪದಕ ಗೆದ್ದ ಭಾರತದ ಅಥ್ಲೀಟ್‌ಗಳು

ಕಠ್ಮಂಡು: ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿರುವ ಭಾರತದ ಅಥ್ಲೀಟ್‌ಗಳು ನಾಲ್ಕು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇಲ್ಲಿನ ದಶರಥ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಭಾರತದ ಅಥ್ಲೀಟ್‌ಗಳಿಗೆ ಒಲಿಯಿತು.
ಪುರುಷರ ವಿಭಾಗದಲ್ಲಿ ಅಜಯ್‌ಕುಮಾರ್ ಸಾರೊ 1500 ಮೀಟರ್ ಓಟವನ್ನು 3 ನಿಮಿಷ 54.18 ಸೆಕೆಂಡುಗಳಲ್ಲಿ ಮುಗಿಸಿ ಚಿನ್ನಕ್ಕೆ ಕೊರಳೊಡ್ಡಿದರು. 3 ನಿಮಿಷ 57.18 ಸೆಕೆಂಡ್‌ಗಳಲ್ಲಿ ಓಟ ಪೂರೈಸಿದ ಅಜೀತ್ ಕುಮಾರ್ಗೆ ಬೆಳ್ಳಿ ದಕ್ಕಿತು. ಕಂಚಿನ ಪದಕವು ನೇಪಾಳದ ತಂಕಾ ಕರ್ಕಿ ಪಾಲಾಯಿತು.
ಮಹಿಳೆಯರ 1500 ಮೀ. ಓಟದಲ್ಲಿ ಭಾರತದ ಚಂದಾ ಬೆಳ್ಳಿ ಗೆದ್ದರು. ಅವರು 4 ನಿಮಿಷ 34.51 ಸೆಕೆಂಡುಗಲ್ಲಿ ಗುರಿ ತಲುಪಿದರು. 4 ನಿಮಿಷ 35.46 ಸೆಕೆಂಡುಗಳಲ್ಲಿ ಓಡಿದ ಚಿತ್ರಾ ಪಾಲಕೀಜ್‌ಗೆ ಕಂಚು ಲಭಿಸಿತು. ಈ ವಿಭಾಗದಲ್ಲಿ ಚಿನ್ನದ ಪದಕವನ್ನು ಶ್ರೀಲಂಕಾದ ಉದಾ ಕುಬುರಲಾ ಕಬಳಿಸಿದರು. ಅವರು 4 ನಿಮಿಷ 34.34 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.