ಬುಧವಾರ, ಜನವರಿ 29, 2020
24 °C

ಈಜು: ಕರ್ನಾಟಕದ ಸ್ಪರ್ಧಿಗಳ ಪ್ರಾಬಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ಸ್ಪರ್ಧಿಗಳು ಹೈದರಾಬಾದ್‌ನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 32ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಶನಿವಾರ ಪ್ರಾಬಲ್ಯ ಮೆರೆದಿದ್ದಾರೆ.

ರಾಜ್‌ ವಿನಾಯಕ್‌ ರೆಳೆಕರ್‌, ಉತ್ಕರ್ಷ್‌ ಎಸ್‌.ಪಾಟೀಲ, ನೀನಾ ವೆಂಕಟೇಶ್‌ ಮತ್ತು ರೇಣುಕಾಚಾರ್ಯ ಹಾದಿಮನಿ ಅವರು ವಿವಿಧ ವಿಭಾಗಗಳಲ್ಲಿ ಅಮೋಘ ಸಾಮರ್ಥ್ಯ ತೋರಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.

ಚಿನ್ನ ಗೆದ್ದ ಕರ್ನಾಟಕದ ಸ್ಪರ್ಧಿಗಳು: ಬಾಲಕರು: 15–17 ವರ್ಷದೊಳಗಿನವರು: 800 ಮೀಟರ್ಸ್‌ ಫ್ರೀಸ್ಟೈಲ್‌: ದೀಪ್‌ ವೆಂಕಟೇಶ್‌ (ಕಾಲ:9 ನಿಮಿಷ 03.88 ಸೆಕೆಂಡು), 200 ಮೀ. ವೈಯಕ್ತಿಕ ಮೆಡ್ಲೆ: ರಾಜ್‌ ವಿನಾಯಕ್‌ ರೆಳೆಕರ್‌ (ಕಾಲ: 2:19.95ಸೆ.), 100 ಮೀ.ಬಟರ್‌ಫ್ಲೈ: ರಾಜ್‌ ವಿನಾಯಕ್‌ ರೆಳೆಕರ್‌ (ಕಾಲ:1:00.02ಸೆ.), 400 ಮೀ. ವೈಯಕ್ತಿಕ ಮೆಡ್ಲೆ: ಬಿ.ಜತಿನ್‌ (5:02.30ಸೆ.), 200 ಮೀ.ಬಟರ್‌ಫ್ಲೈ: ಸುದರ್ಶನ್‌ (2:13.43ಸೆ.).

12–14 ವರ್ಷದೊಳಗಿನವರು: 200 ಮೀ. ವೈಯಕ್ತಿಕ ಮೆಡ್ಲೆ: ಎಸ್‌.ಉತ್ಕರ್ಷ್‌ ಪಾಟೀಲ (ಕಾಲ: 2:21.80ಸೆ.), 100 ಮೀ.ಬಟರ್‌ಫ್ಲೈ: ಎಸ್‌.ಉತ್ಕರ್ಷ್‌ ಪಾಟೀಲ (1:02.30ಸೆ.), 50 ಮೀ.ಬ್ಯಾಕ್‌ಸ್ಟ್ರೋಕ್‌: ವಿ.ಗ್ರೂಥನ್‌ (30.33ಸೆ.), 200 ಮೀ.ಬಟರ್‌ಫ್ಲೈ: ಎಸ್‌.ಉತ್ಕರ್ಷ್‌ ಪಾಟೀಲ (2:17.97ಸೆ.).

11 ವರ್ಷದವರು: 100 ಮೀ.ಫ್ರೀಸ್ಟೈಲ್‌; ಆರ್‌.ನವನೀತ್‌ ಗೌಡ (ಕಾಲ:1:06.58ಸೆ.), 100 ಮೀ.ಬಟರ್‌ಫ್ಲೈ: ರೇಣುಕಾಚಾರ್ಯ ಹಾದಿಮನಿ (1:11.39ಸೆ.), 200 ಮೀ.ವೈಯಕ್ತಿಕ ಮೆಡ್ಲೆ: ರೇಣುಕಾಚಾರ್ಯ ಹಾದಿಮನಿ (2:40.54ಸೆ.). 

ಬಾಲಕಿಯರು: 15–17 ವರ್ಷದೊಳಗಿನವರು: 800ಮೀ.ಫ್ರೀಸ್ಟೈಲ್‌: ನಿಧಿ ಶಶಿಧರ್‌ (ಕಾಲ: 10:35.69ಸೆ.), 100 ಮೀ.ಬಟರ್‌ಫ್ಲೈ: ಎನ್‌.ವಿದ್ಯಾಶ್ರೀ (ಕಾಲ: 1:11.03ಸೆ.), 50 ಮೀ.ಬ್ಯಾಕ್‌ಸ್ಟ್ರೋಕ್‌: ಸುವನಾ ಸಿ.ಭಾಸ್ಕರ್‌ (31.87ಸೆ.), 400 ಮೀ. ವೈಯಕ್ತಿಕ ಮೆಡ್ಲೆ: ಗುಣ ಮಠ್‌ (5:42.13ಸೆ.), 100 ಮೀ. ಫ್ರೀಸ್ಟೈಲ್‌: ಬಿ.ಇಂಚರಾ (1:04.56ಸೆ.).

12–14 ವರ್ಷದೊಳಗಿನವರು: ಅಸ್ಮಿತಾ ಚಂದ್ರ (ಕಾಲ: 10:08.57ಸೆ.), 200 ಮೀ. ವೈಯಕ್ತಿಕ ಮೆಡ್ಲೆ: ಎಸ್‌.ಲಕ್ಷ್ಯಾ (ಕಾಲ: 2:41.10ಸೆ.), 100 ಮೀ. ಬಟರ್‌ಫ್ಲೈ: ನೀನಾ ವೆಂಕಟೇಶ್‌ (1:08.68ಸೆ.), 50 ಮೀ. ಬ್ಯಾಕ್‌ಸ್ಟ್ರೋಕ್‌: ನೀನಾ ವೆಂಕಟೇಶ್‌ (32.68ಸೆ.), 200 ಮೀ.ಬಟರ್‌ಫ್ಲೈ: ರಿಷಿಕಾ ಯು.ಮಂಗಳೆ (2:37.11ಸೆ.), 100 ಮೀ. ಫ್ರೀಸ್ಟೈಲ್‌: ಅಸ್ಮಿತಾ ಚಂದ್ರ (1:04.66ಸೆ.), 400 ಮೀ.ವೈಯಕ್ತಿಕ ಮೆಡ್ಲೆ: ಎಸ್.ಲಕ್ಷ್ಯಾ (5:40.06ಸೆ.).

11 ವರ್ಷದವರು: 100 ಮೀ.ಫ್ರೀಸ್ಟೈಲ್‌; ಆರ್‌.ಹಾಶಿಕಾ (ಕಾಲ: 1:07.99ಸೆ.), 100 ಮೀ.ಬಟರ್‌ಫ್ಲೈ: ಆರ್‌.ಹಾಶಿಕಾ (1:13.38ಸೆ.), 200 ಮೀ.ವೈಯಕ್ತಿಕ ಮೆಡ್ಲೆ: ವಿಹಿತಾ ನಯನ (2:45.09ಸೆ.).

9–10 ವರ್ಷದೊಳಗಿನವರು: 200 ಮೀ. ವೈಯಕ್ತಿಕ ಮೆಡ್ಲೆ: ಧಿನಿದಿ ದೇಸಿಂಗು (ಕಾಲ: 2:47.21ಸೆ.), 50 ಮೀ. ಬಟ‌ರ್‌ಫ್ಲೈ: ಮೋನ್ಯಾ ಕೌಶುಮಿ (33.36ಸೆ).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು