ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲ್ಬೀರ್ ಸಿಂಗ್ ನಿಧನ: ಕಂಬನಿ ಮಿಡಿದ ಕ್ರೀಡಾ ತಾರೆಯರು

Last Updated 25 ಮೇ 2020, 20:15 IST
ಅಕ್ಷರ ಗಾತ್ರ

ನವದೆಹಲಿ:ಹಿರಿಯ ಹಾಕಿ ಆಟಗಾಗ ಬಲ್ಬೀರ್ ಅವರ ನಿಧನಕ್ಕೆ ಕ್ರೀಡಾ ತಾರೆಯರು ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ.

ಪದ್ಮಶ್ರೀ ಬಲ್ಬೀರ್‌ ಸಿಂಗ್‌ ಅವರು ಮಹೋನ್ನತಸಾಧನೆಯ ಮೂಲಕ ಭಾರತದ ಹಿರಿಮೆ ಹೆಚ್ಚಿಸಿದ್ದಾರೆ. ಅವರ ಅಗಲಿಕೆಯ ವಿಷಯ ತಿಳಿದು ಮನಸ್ಸು ಭಾರವಾಯಿತು.

ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಬಲ್ಬೀರ್‌ ಅವರು ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದರು. ಅವರ ಸಾಧನೆ ನಮ್ಮೆಲ್ಲರ ಮನದಲ್ಲೂ ಶಾಶ್ವತವಾಗಿ ಉಳಿಯಲಿದೆ

ಮೊಹಮ್ಮದ್‌ಮುಷ್ತಾಕ್‌ ಅಹಮದ್‌, ಹಾಕಿ ಇಂಡಿಯಾ ಅಧ್ಯಕ್ಷ

ಕ್ರೀಡಾ ಲೋಕದ ಕಣ್ಮಣಿಯಾಗಿದ್ದ ಬಲ್ಬೀರ್‌ ಅವರ ನಿಧನದ ಸುದ್ದಿ ತಿಳಿದು ತುಂಬಾ ನೋವಾಯಿತು. ಅವರು ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದ್ದರು.

ಅಭಿನವ್‌ ಬಿಂದ್ರಾ, ಒಲಿಂಪಿಯನ್‌ ಶೂಟರ್‌

ಬಲ್ಬೀರ್‌ ಅವರು ಸಭ್ಯ ಆಟಕ್ಕೆ ಹೆಸರಾದವರು. ಸದಾ ಹಸನ್ಮುಖಿಯಾಗಿರುತ್ತಿದ್ದರು. ಅವರ ಸಾಧನೆ ಯುವ ಸಮುದಾಯಕ್ಕೆ ಪ್ರೇರಣೆ.

ವೀರೆನ್‌ ರಸ್ಕಿನ್‌, ಹಿರಿಯ ಹಾಕಿ ಆಟಗಾರ

ಭಾರತದ ಹಾಕಿ ಪಾಲಿಗೆ ಇಂದು ಕರಾಳ ದಿನ. ನನ್ನಂತಹ ಸಾಕಷ್ಟು ಮಂದಿ ಆಟಗಾರರಿಗೆ ಅವರು ಆದರ್ಶರಾಗಿದ್ದರು.

ಸರ್ದಾರ್‌ ಸಿಂಗ್‌, ಹಿರಿಯ ಹಾಕಿ ಆಟಗಾರ

ಬಲ್ಬೀರ್‌ ನಿಧನದ ಸುದ್ದಿ ತಿಳಿದು ಆಘಾತವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಪಿ.ಆರ್‌.ಶ್ರೀಜೇಶ್‌, ಭಾರತ ಹಾಕಿ ತಂಡದ ಗೋಲ್‌ಕೀಪರ್‌

ಭಾರತದ ಹಾಕಿ ಬೆಳವಣಿಗೆಗೆ ಬಲ್ಬೀರ್‌ ಅವರು ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಅಗಲಿಕೆಯಿಂದ ಭಾರತದ ಹಾಕಿಗೆ ಬಹುದೊಡ್ಡ ನಷ್ಟವಾಗಿದೆ

ರಾಣಿ ರಾಂಪಾಲ್‌, ಭಾರತ ಮಹಿಳಾ ಹಾಕಿ ತಂಡದ ನಾಯಕಿ

ದಿಗ್ಗಜ ಆಟಗಾರ ಬಲ್ಬೀರ್‌ ಅವರ ನಿಧನದ ಸುದ್ದಿ ತಿಳಿದು ನೋವಾಯಿತು.ಅವರ ಕುಟುಂಬಕ್ಕೆ ಭಗವಂತ ದುಃಖ ತಡೆದುಕೊಳ್ಳುವ ಶಕ್ತಿ ಕರುಣಿಸಲಿ

ವಿರಾಟ್‌ ಕೊಹ್ಲಿ, ಭಾರತ ಕ್ರಿಕೆಟ್‌ ತಂಡದ ನಾಯಕ

ಹಾಕಿ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಬಲ್ಬೀರ್‌ ಕೂಡ ಒಬ್ಬರು. ಅವರ ಸಾಧನೆ ಅಜರಾಮರ. ಅವರ ನೆನಪು ನಮ್ಮೆಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ

ಹರಭಜನ್‌ ಸಿಂಗ್‌, ಭಾರತದ ಹಿರಿಯ ಕ್ರಿಕೆಟಿಗ

ಬಲ್ಬೀರ್‌ ಅವರ ಸಾಧನೆ ಪದಗಳಿಗೆ ನಿಲುಕದ್ದು. ಮನಮೋಹಕ ಆಟದಿಂದಾಗಿಯೇ ಅವರು ಎಲ್ಲರ ಮನೆಮಾತಾಗಿದ್ದರು.

ಪಿ.ಟಿ.ಉಷಾ, ಹಿರಿಯ ಅಥ್ಲೀಟ್‌

ನಾನು ಬಲ್ಬೀರ್‌ ಸಿಂಗ್ ಅವರ ಬಹುದೊಡ್ಡ ಅಭಿಮಾನಿ.‌ ಅವರೊಂದಿಗೆ ಒಂದು ಫೋಟೊ ತೆಗೆಸಿಕೊಳ್ಳಬೇಕೆಂಬ ಬಯಕೆ ಇತ್ತು. ಅದು ಕೊನೆಗೂ ಈಡೇರಲೇ ಇಲ್ಲ.

ಹೀನಾ ಸಿಧು, ಒಲಿಂಪಿಯನ್‌ ಶೂಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT