ಕ್ರೀಡಾ ತರಬೇತಿಗೆ ಸಾಯ್‌ ಅರ್ಜಿ ಆಹ್ವಾನ

7

ಕ್ರೀಡಾ ತರಬೇತಿಗೆ ಸಾಯ್‌ ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಬೆಂಗಳೂರು ಕೇಂದ್ರವು ತರಬೇತಿಗಾಗಿ ಯುವ ಕ್ರೀಡಾ ಪಟುಗಳಿಂದ ಅರ್ಜಿ ಆಹ್ವಾನಿಸಿದೆ.

12ರಿಂದ 18 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೆದ್ದಿರುವ ಕ್ರೀಡಾಪಟು ಗಳಿಗೆ ಆಧ್ಯತೆ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಪದಕ ಗೆದ್ದಿರುವ
ವರನ್ನೂ ಪರಿಗಣಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

‌ಜನವರಿ 27ರಿಂದ 29ರ ವರೆಗೆ ಫುಟ್‌ಬಾಲ್‌, 28ರಿಂದ 31ರವರೆಗೆ ಹಾಕಿ ಹಾಗೂ 29 ಮತ್ತು 30 ರಂದು ಜುಡೋ,  30 ಮತ್ತು 31ರಂದು ವಾಲಿಬಾಲ್‌, ಸಾಫ್ಟ್‌ಬಾಲ್‌, ಕಬಡ್ಡಿ (ಬಾಲಕರು), ಬ್ಯಾಡ್ಮಿಂಟನ್‌(ಬಾಲಕ) ವಿಭಾಗಗಳಲ್ಲಿ ಆಯ್ಕೆ ನಡೆಯಲಿದೆ.

ಫೆಬ್ರುವರಿ 2 ಮತ್ತು 3ರಂದು ಟೆಕ್ವಾಂಡೊ (ಬಾಲಕರು ಮತ್ತು ಬಾಲಕಿಯರು), ಮಾರ್ಚ್‌ 5 ಮತ್ತು 7 ರಂದು ವೇಟ್‌ಲಿಫ್ಟಿಂಗ್‌ (ಬಾಲಕರು ಮತ್ತು ಬಾಲಕಿಯರು) ವಿಭಾಗದ ಆಯ್ಕೆ ನಡೆಯಲಿದೆ. ಮಾಹಿತಿಗೆ 080–22221671 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !