ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪ್ರಿಂಟರ್ ಹಿಮಾ ದಾಸ್‌ಗೆ ಕೋವಿಡ್ ಸೋಂಕು

Last Updated 13 ಅಕ್ಟೋಬರ್ 2021, 12:55 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಸ್ಪ್ರಿಂಟ್ ತಾರೆ ಹಿಮಾ ದಾಸ್ ಅವರಿಗೆ ಕೋವಿಡ್–19 ಸೋಂಕು ತಗುಲಿದೆ. ಟ್ವೀಟ್ ಮೂಲಕ ಅವರು ಸ್ವತಃ ಈ ವಿಷಯ ತಿಳಿಸಿದ್ದು ಸದ್ಯ ಪ್ರತ್ಯೇಕವಾಸದಲ್ಲಿದ್ದು ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ.

21 ವರ್ಷದ ಹಿಮಾ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಇಚೆಗೆ ಆರಂಭಗೊಂಡಿರುವ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿದ್ದರು. ‘ಪ್ರತ್ಯೇಕವಾಸದ ಸಂದರ್ಭವನ್ನು ವಿಶ್ರಾಂತಿಗಾಗಿ ಬಳಸಿಕೊಳ್ಳಲಿದ್ದೇನೆ. ಇನ್ನಷ್ಟು ಬಲಶಾಲಿಯಾಗಿ ಟ್ರ್ಯಾಕ್‌ಗೆ ಇಳಿಯಲು ಇದು ನೆರವಾಗಲಿದೆ. ಎಲ್ಲರೂ ಮಾಸ್ಕ್ ಧರಿಸಿ, ಸುರಕ್ಷಿತವಾಗಿರಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹಿಮಾದಾಸ್ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರಲಿಲ್ಲ. ಫೆಡರೇಷನ್ ಕಪ್‌ನಲ್ಲಿ ಹಿಮಾ ದಾಸ್23.21 ಸೆಕೆಂಡುಗಳಲ್ಲಿ 200 ಮೀಟರ್ಸ್ ಓಟ ಪೂರ್ಣಗೊಳಿಸಿದ್ದರು. ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು22.80 ಸೆಕೆಂಡು ನಿಗದಿ ಮಾಡಲಾಗಿತ್ತು. ಮಂಡಿರಜ್ಜು ಗಾಯದ ಸಮಸ್ಯೆಯಿಂದಾಗಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಒಲಿಂಪಿಕ್ಸ್‌ ಕನಸು ಭಗ್ನಗೊಂಡಿತ್ತು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಕೆಲವೇ ದಿನಗಳಲ್ಲಿ ಸೋಂಕಿಗೆ ಒಳಗಾಗಿದ್ದಾರೆ.

2018ರಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನ 400 ಮೀಟರ್ಸ್ ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ಹಿಮಾ ದಾಸ್ ಅವರು ವಿಶ್ವ ಚಾಂಪಿಯನ್ ಆದ ಭಾರತದ ಮೊದಲ ಸ್ಪ್ರಿಂಟರ್‌ ಎನಿಸಿಕೊಂಡಿದ್ದರು. ಚಾಂಪಿಯನ್‌ಷಿಪ್‌ನಲ್ಲಿ ಅವರು51.46 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT