ಸೋಮವಾರ, ಫೆಬ್ರವರಿ 17, 2020
27 °C
ಕ್ಲೆವ್‌ಲ್ಯಾಂಡ್‌ ಕ್ಲಾಸಿಕ್‌ ಸ್ಕ್ವಾಷ್‌ ಟೂರ್ನಿ

ಕ್ಲೆವ್‌ಲ್ಯಾಂಡ್‌ ಕ್ಲಾಸಿಕ್‌ ಸ್ಕ್ವಾಷ್‌ ಟೂರ್ನಿ: ಸೆಮಿಫೈನಲ್‌ಗೆ ಜೋಷ್ನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ಲೆವ್‌ಲ್ಯಾಂಡ್‌, ಅಮೆರಿಕ: ಭಾರತದ ಜೋಷ್ನಾ ಚಿನ್ನಪ್ಪ ಅವರು ಕ್ಲೆವ್‌ಲ್ಯಾಂಡ್‌ ಕ್ಲಾಸಿಕ್‌ ಸ್ಕ್ವಾಷ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗಯಿಟ್ಟಿದ್ದಾರೆ. ಶನಿವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಅವರು 3–6, 11–6, 6–11, 11–8, 11–6ರಿಂದ ಹಾಂಗ್‌ಕಾಂಗ್‌ನ ಆ್ಯನ್ನಿ ವು ಅವರನ್ನು ಸೋಲಿಸಿದರು.

ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಭಾರತದ ಆಟಗಾರ್ತಿಗೆ ಗೆಲುವು ಸುಲಭ ತುತ್ತಾಗಲಿಲ್ಲ. ಕನಿಷ್ಠ ಒಂದು ತಾಸು ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಎದುರಾಳಿಯನ್ನು ಸದೆಬಡಿಯುವಲ್ಲಿ ಜೋಷ್ನಾ ಯಶಸ್ವಿಯಾದರು.

ಜೋಷ್ನಾ ಅವರಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. ಎರಡನೇ ಸುತ್ತಿನ ಹಣಾಹಣಿಯಲ್ಲಿ ಅವರು ಈಜಿಪ್ಟ್‌ನ ಮೆನ್ನಾ ನಾಸರ್‌ ಎದುರು ಸುಲಭವಾಗಿ ಗೆದ್ದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು