ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಹರಿ ನಟರಾಜ್‌ ‘ಡಬಲ್‌’ ದಾಖಲೆ

ರಾಜ್ಯ ಈಜು ಚಾಂಪಿಯನ್‌ಷಿಪ್‌: ಮಿಂಚಿದ ರಿಧಿಮಾ, ನೀನಾ; ರಿಲೆಯಲ್ಲಿ ಬಿಎಸಿಗೆ ಚಿನ್ನ
Last Updated 27 ಸೆಪ್ಟೆಂಬರ್ 2021, 16:53 IST
ಅಕ್ಷರ ಗಾತ್ರ

ಬೆಂಗಳೂರು: ಫ್ರೀಸ್ಟೈಲ್ ಮತ್ತು ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಡಾಲ್ಫಿನ್ ಈಜು ಕೇಂದ್ರದ ಶ್ರೀಹರಿ ನಟರಾಜ್ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡರು. ಬಾಲಕಿಯರ ವಿಭಾಗದ ಬ್ಯಾಕ್‌ಸ್ಟ್ರೋಕ್ ಮತ್ತು ಬಟರ್‌ಫ್ಲೈನಲ್ಲಿ ಕ್ರಮವಾಗಿ ಬಸವನಗುಡಿ ಈಜುಕೇಂದ್ರದ ರಿಧಿಮಾ ವೀರೇಂದ್ರ ಕುಮಾರ್ ಹಾಗೂ ಡಾಲ್ಫಿನ್‌ ಈಜುಕೇಂದ್ರದ ನೀನಾ ವೆಂಕಟೇಶ್ ದಾಖಲೆ ಬರೆದರು.

ರಾಜ್ಯ ಈಜು ಸಂಸ್ಥೆಯ ಆಶ್ರಯದಲ್ಲಿ ಬಸವನಗುಡಿಯ ಪಾಲಿಕೆ ಈಜುಕೇಂದ್ರದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಶ್ರೀಹರಿ 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ 2 ನಿಮಿಷ 6.37 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕೂಟ ದಾಖಲೆ ಬರೆದರು. 50 ಮೀ ಫ್ರೀಸ್ಟೈಲ್‌ನಲ್ಲಿ 51.36 ಸೆಕೆಂಡುಗಳ ಸಾಧನೆಯೊಂದಿಗೆ ದಾಖಲೆ ನಿರ್ಮಿಸಿದರು.

ಐದನೇ ದಿನದ ಫಲಿತಾಂಶಗಳು: ಪುರುಷರು: 50 ಮೀ ಬ್ರೆಸ್ಟ್‌ಸ್ಟ್ರೋಕ್: ಪೃಥ್ವಿಕ್ ಡಿ.ಎಸ್‌ (ಬಸವನಗುಡಿ)–1. ಕಾಲ:31.01, ವಿಕ್ರಂ ಗೌಡ(ಬಸವನಗುಡಿ)–2, ಕಾರ್ತಿಕ್ ರವಿ (ಬೆಂಗಳೂರು ಈಜು ಸಂಶೋಧನಾ ಕೇಂದ್ರ–ಬಿಎಸ್‌ಆರ್‌ಸಿ)–3; 200 ಮೀ ಬ್ರೆಸ್ಟ್‌ಸ್ಟ್ರೋಕ್‌: ಶ್ರೀಹರಿ ನಟರಾಜ್ (ಡಾಲ್ಫಿನ್)–1. ಕಾಲ:2:06.37 (ಕೂಟ ದಾಖಲೆ), ಶಿವ ಎಸ್‌ (ಬಸವನಗುಡಿ)–2, ಜತಿನ್ ಬಿ (ಬಿಎಸ್‌ಆರ್‌ಸಿ)–3; 100 ಮೀ ಫ್ರೀಸ್ಟೈಲ್‌: ಶ್ರೀಹರಿ ನಟರಾಜ್ (ಡಾಲ್ಫಿನ್)–1. ಕಾಲ:51.36 (ಕೂಟ ದಾಖಲೆ), ತನಿಶ್ ಜಾರ್ಜ್ ಮ್ಯಾಥ್ಯೂ–2, ರಾಜ್ ವಿನಾಯಕ್‌–3 (ಇಬ್ಬರೂ ಬಸವನಗುಡಿ); 50 ಮೀ ಬಟರ್‌ಫ್ಲೈ: ತನಿಶ್ ಜಾರ್ಜ್ ಮ್ಯಾಥ್ಯೂ–1. ಕಾಲ:26.05, ಪೃಥ್ವಿ –2 (ಇಬ್ಬರೂ ಬಸವನಗುಡಿ), ಆದಿತ್ಯ ಭಂಡಾರಿ (ಜೈಹಿಂದ್, ಮಂಗಳೂರು)–3. ಮಹಿಳೆಯರ 200 ಮೀ ಬ್ಯಾಕ್‌ಸ್ಟ್ರೋಕ್‌: ದಾಮಿನಿ ಗೌಡ (ಬಸವನಗುಡಿ)–1. ಕಾಲ:2:37.96, ಭೂಮಿಕಾ ಕೇಸರಕರ್ (ಬಿಎಸ್‌ಆರ್‌ಸಿ)–2, ಕ್ಷಿತಿಜಾ (ಬಸವನಗುಡಿ)–3; 100 ಮೀ ಫ್ರೀಸ್ಟೈಲ್‌: ಮಧುರಾ (ಬಸವನಗುಡಿ)–1. ಕಾಲ: 1:03.09, ಪ್ರೀತಾ (ಡಿಕೆವಿ)–2, ಸುನಯನಾ ಮಂಜುನಾಥ (ಬಸವನಗುಡಿ)–3; 50 ಮೀ ಬಟರ್‌ಫ್ಲೈ: ದಾಮಿನಿ ಗೌಡ–1. ಕಾಲ:31.69, ಮಯೂರಿ ಲಿಂಗರಾಜ್‌–2, ಸುನಯನಾ ಮಂಜುನಾಥ್‌–3 (ಮೂವರೂ ಬಸವನಗುಡಿ). ಬಾಲಕರ 50 ಮೀ ಬ್ರೆಸ್ಟ್‌ಸ್ಟ್ರೋಕ್‌, ಗುಂಪು–1: ವಿಧಿತ್ ಶಂಕರ್ (ಡಾಲ್ಫಿನ್)–1. ಕಾಲ:30.75, ಪ್ರಣವ್‌ ಭಾರತಿ–2, ಅದಿತ್‌ ಸ್ಮರಣ್–3 (ಇಬ್ಬರೂ ಬಸವನಗುಡಿ); ಗುಂಪು2: ಸೂರ್ಯ ಜ್ಯೋತಪ್ಪ (ಬಸನವನಗುಡಿ)–1. ಕಾಲ: 33.57, ಸುಯೋಗ್ ಗೌಡ (ನೆಟ್ಟಕಲ್ಲಪ್ಪ ಈಜುಕೇಂದ್ರ)–2, ಕೃಷ್ಣ ಜಗದಾಳೆ (ಬಸವನಗುಡಿ)–3; 200 ಮೀ ಬ್ಯಾಕ್‌ಸ್ಟ್ರೋಕ್, ಗುಂಪು–1: ಉತ್ಕರ್ಷ್ ಸಂತೋಷ್ (ಬಸವನಗುಡಿ)–1. ಕಾಲ:2:07.15, ಅಕ್ಷಯ ಶೇಟ್‌–2, ಮನನ್‌–3 (ಇಬ್ಬರೂ ಬಿಎಸ್‌ಆರ್‌ಸಿ); ಗುಂಪು2: ಯಶ್ ಕಾರ್ತಿಕ್ (ಬಸವನಗುಡಿ)–1. ಕಾಲ:2:28.78, ದಿಗಂತ್ (ಡಾಲ್ಫಿನ್‌)–2, ಅನಂತಜೀತ್ ಮುಖರ್ಜಿ (ಬಿಎಸ್ಆರ್‌ಸಿ)–3; 100 ಮೀ ಫ್ರೀಸ್ಟೈಲ್‌, ಗುಂಪು1: ಸಂಭವ್‌ (ಬಿಎಸ್‌ಆರ್‌ಸಿ)–1. ಕಾಲ: 52.10, ತರುಣ್‌ ಅರುಣ್ ಗೌಡ–2, ಸಂಜೀತ್‌–3 (ಇಬ್ಬರೂ ಬಸವನಗುಡಿ); ಗುಂಪು2: ಸೂರ್ಯ ಜ್ಯೋತಪ್ಪ (ಬಸವನಗುಡಿ)–1. ಕಾಲ: 58.75, ಚಿಂತನ್ ಶೆಟ್ಟಿ (ಮಂಗಳ ಈಜುಕೇಂದ್ರ)–2, ಅನಂತಜೀತ್ ಮುಖರ್ಜಿ (ಬಿಎಸ್ಆರ್‌ಸಿ)–3; 50 ಮೀ ಬಟರ್‌ಫ್ಲೈ: ಸಂಭವ್‌ (ಬಿಎಸ್ಆರ್‌ಸಿ)–1. ಕಾಲ: 26.02, ನಯನ್ ವಿಘ್ನೇಶ್ (ನೆಟ್ಟಕಲ್ಲಪ್ಪ ಈಜುಕೇಂದ್ರ)–2, ಸಾಯಿ ಸಮರ್ಥ್‌ (ವಿಜಯನಗರ ಈಜುಕೇಂದ್ರ)–3; ಗುಂಪು2: ಚಿಂತನ್ ಶೆಟ್ಟಿ (ಮಂಗಳ)–1. ಕಾಲ:28.63, ನಿರಂಜನ್ ಕಾರ್ತಿಕ್ (ಬಿಎಸ್ಆರ್‌ಸಿ)–2, ಸ್ಟೀವ್ ಜೆಫ್‌ (ಡಾಲ್ಫಿನ್‌)–3;4 x 100 ಮೀ ಫ್ರೀಸ್ಟೈಲ್‌, ಗುಂಪು1: ಬಸವನಗುಡಿ ಈಜುಕೇಂದ್ರ (3:40.03 )–1 (ಕೂಟ ದಾಖಲೆ), ಬಸವನಗುಡಿ ಬಿ–2, ಡಾಲ್ಫಿನ್‌–3; 4 x 200 ಫ್ರೀಸ್ಟೈಲ್‌: ಡಾಲ್ಫಿನ್‌–1, ಬಸವನಗುಡಿ–2, ಬಸವನಗುಡಿ ಬಿ–3; ಬಾಲಕಿಯರ 50 ಮೀ ಬ್ರೆಸ್ಟ್‌ಸ್ಟ್ರೋಕ್‌: ಅನ್ವಿತಾ ಗೌಡ (ಡಾಲ್ಫಿನ್)–1. ಕಾಲ:36.04, ಸಾನ್ವಿ ರಾವ್‌ (ಬಿಎಸ್‌ಆರ್‌ಸಿ)–2, ಸಮರ ಚಾಕೊ (ಸ್ವಿಮ್ ಲೈಫ್‌)–3; ಗುಂಪು2: ಮಾನವಿ ವರ್ಮಾ (ಡಾಲ್ಫಿನ್‌)–1. ಕಾಲ: 36.45, ವಿಹಿತಾ ನಯನ (ಬಸವನಗುಡಿ)–2, ಲಿನೇಶ್ಯಾ (ಬಿಎಸ್‌ಆರ್‌ಸಿ)–3; 200 ಮೀ ಬ್ಯಾಕ್‌ಸ್ಟ್ರೋಕ್‌, ಗುಂಪು1: ಋತು ಭರಮರಡ್ಡಿ (ಬಸವನಗುಡಿ)–1. ಕಾಲ: 2:36.1, ನೈಶಾ ಶೆಟ್ಟಿ–2, ಇಮಾನಿ ಜಾಧವ್‌–3 (ಇಬ್ಬರೂ ಡಾಲ್ಫಿನ್‌); ಗುಂಪು2: ರಿಧಿಮಾ ವೀರೇಂದ್ರ ಕುಮಾರ್ (ಬಸವನಗುಡಿ)–1. ಕಾಲ:2:27.74 (ಕೂಟ ದಾಖಲೆ), ಶಾಲಿನಿ ದೀಕ್ಷಿತ್ (ಡಾಲ್ಫಿನ್‌)–2, ಸುನಿಧಿ (ಸ್ವಿಮ್ಮರ್ಸ್ ಕ್ಲಬ್‌, ಬೆಳಗಾವಿ)–3; 100 ಮೀ ಫ್ರೀಸ್ಟೈಲ್‌, ಗುಂಪು1: ನೀನಾ ವೆಂಕಟೇಶ್‌ (ಡಾಲ್ಫಿನ್‌)–1. ಕಾಲ:1:00.27, ಲತೀಶಾ ಮಂದಾನ–2, ಇಂಚರ ಬಿ–3 (ಇಬ್ಬರೂ ಜಿಎಎಫ್‌ಆರ್‌ಎವೈ); ಗುಂಪು2: ರಿಧಿಮಾ ವೀರೇಂದ್ರಕುಮಾರ್ –1. ಕಾಲ: 1:02.22, ಶಿರೀನ್‌–2 (ಇಬ್ಬರೂ ಬಸವನಗುಡಿ), ಶಾಲಿನಿ ದೀಕ್ಷಿತ್‌ (ಡಾಲ್ಫಿನ್‌)–3; 50 ಮೀ ಬಟರ್‌ಫ್ಲೈ: ನೀನಾ ವೆಂಕಟೇಶ್–1. ಕಾಲ:29.0 (ಕೂಟ ದಾಖಲೆ), ನೈಶಾ ಶೆಟ್ಟಿ–2 (ಇಬ್ಬರೂ ಡಾಲ್ಫಿನ್‌)–2, ಎ.ಜೆಡಿಡಾ (ಡಿಕೆವಿ)–3; ಗುಂಪು2: ರಿಷಿಕಾ ಮಾಂಗ್ಲೆ (ವಿಜಯನಗರ)–1. ಕಾಲ: 29.87, ಮಾನವಿ ವರ್ಮಾ (ಬಸವನಗುಡಿ)–2, ಮೋನ್ಯಾ ಕೌಸುಮಿ (ನೆಟ್ಟಕಲ್ಲಪ್ಪ ಈಜುಕೇಂದ್ರ)–3; 4 x 100 ಫ್ರೀಸ್ಟೈಲ್‌: ಡಾಲ್ಫಿನ್–1, ಡಾಲ್ಫಿನ್ ಬಿ–2, ಬಸವನಗುಡಿ–3; 4 x 200 ಫ್ರೀಸ್ಟೈಲ್‌: ಡಾಲ್ಫಿನ್‌–1, ಬಸವನಗುಡಿ–2, ವಿಜಯನಗರ–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT