ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಹರಿ ದಾಖಲೆ ಮೀರಿದ ಸಂಭವ್‌

ರಾಷ್ಟ್ರೀಯ ಜೂನಿಯರ್‌, ಸಬ್‌ಜೂನಿಯರ್ ಈಜು ಚಾಂಪಿಯನ್‌ಷಿಪ್‌
Last Updated 19 ಅಕ್ಟೋಬರ್ 2021, 18:52 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಸಂಭವ್ ಆರ್‌. ಅವರು ಒಲಿಂಪಿಯನ್‌ ಶ್ರೀಹರಿ ನಟರಾಜ್‌ ಅವರ ಮೂರು ವರ್ಷಗಳ ಹಿಂದಿನ ದಾಖಲೆ ಮೀರಿದರು.

ಇಲ್ಲಿಯ ಬಸವನಗುಡಿ ಈಜು ಕೇಂದ್ರದಲ್ಲಿ ಆರಂಭವಾದ ರಾಷ್ಟ್ರೀಯ ಜೂನಿಯರ್ ಮತ್ತು ಸಬ್‌ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನ 200 ಮೀ. ಫ್ರೀಸ್ಟೈಲ್ ವಿಭಾಗದ ಒಂದನೇ ಗುಂಪಿನಲ್ಲಿ ಚಿನ್ನದ ಪದಕ ಗಳಿಸಿದರು. ಸಂಭವ್‌ 1 ನಿಮಿಷ 53. 41 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಶ್ರೀಹರಿ ಅವರು 2018ರಲ್ಲಿ 1 ನಿಮಿಷ 53.54 ಸೆಕೆಂಡುಗಳಲ್ಲಿ ನಿಗದಿತ ಗುರಿ ಮುಟ್ಟಿದ್ದರು.

ಈ ವಿಭಾಗದಲ್ಲಿ ಕರ್ನಾಟಕದ ಅನೀಶ್‌ ಎಸ್‌. ಗೌಡ ಬೆಳ್ಳಿ ಗೆದ್ದರೆ, ಮಹಾರಾಷ್ಟ್ರದ ವೇದಾಂತ್ ಮಾಧವನ್‌ ಕಂಚು ತಮ್ಮದಾಗಿಸಿಕೊಂಡರು.

ಬಾಲಕಿಯರ 200 ಮೀ. ಫ್ರೀಸ್ಟೈಲ್‌ ಮೂರನೇ ಗುಂಪಿನಲ್ಲಿ ಸ್ಪರ್ಧಿಸಿದ್ದ ಧಿನಿಧಿ ದೇಸಿಂಗು ಕೂಡ 11 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿದರು. 2 ನಿಮಿಷ 14.94 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ 2010ರಲ್ಲಿ ಮೋನಿಕಾ ಗಾಂಧಿ ನಿರ್ಮಿಸಿದ್ದ ದಾಖಲೆ (2:17.52) ಅಳಿಸಿ ಹಾಕಿದರು.

ಮೊದಲ ದಿನದ ಫಲಿತಾಂಶಗಳು: 200 ಮೀ. ಫ್ರೀಸ್ಟೈಲ್‌: ಬಾಲಕರ ಗುಂಪು 1: ಸಂಭವ್‌ ಆರ್‌ (ಕರ್ನಾಟಕ)–1 ಕಾಲ: 1:53.41 (ನೂತನ ದಾಖಲೆ), ಅನೀಶ್ ಎಸ್‌. ಗೌಡ (ಕರ್ನಾಟಕ)–2, ವೇದಾಂತ್‌ ಮಾಧವನ್‌ (ಮಹಾರಾಷ್ಟ್ರ)–3. ಗುಂಪು 2: ಪ್ರಾಂಜಲ್ ಪಾಂಡೆ (ಮಹಾರಾಷ್ಟ್ರ)–1, ಕಾಲ: 2:4.82, ಅನಂತಜೀತ್‌ ಮುಖರ್ಜಿ (ಕರ್ನಾಟಕ)–2, ರಿಷಭ್ ದಾಸ್‌ (ಮಹಾರಾಷ್ಟ್ರ)–3. ಗುಂಪು 3: ಯಜ್ಞ ಸಾಯಿ ಎಂ. (ಮಹಾರಾಷ್ಟ್ರ)–1, ಕಾಲ: 2:20.71, ತೇಜಸ್‌ ಕುಮಾರ್ ಟಿ.ಎಸ್‌. (ತೆಲಂಗಾಣ)–2, ರಕ್ಷಣ್ ಪಿ. (ಕರ್ನಾಟಕ)–3. ಗುಂಪು 4: ಶರಣ್ ಶ್ರೀಧರ್‌ (ಕರ್ನಾಟಕ)–1, ಕಾಲ: 2:24.39, ಕಾಬಿಲನ್‌ ಟಿ. (ತಮಿಳುನಾಡು)–2, ಇಶಾನ್ ಘೋಷ್‌ (ಬಂಗಾಳ)–3.

200 ಮೀ. ಫ್ರೀಸ್ಟೈಲ್‌:ಬಾಲಕಿಯರ ಗುಂಪು 1: ಆನ್ಯಾ ವಾಲಾ (ಮಹಾರಾಷ್ಟ್ರ)–1 ಕಾಲ: 2:9.86, ಕಿಯಾರ ಬೆಂಗೆರ (ಮಹಾರಾಷ್ಟ್ರ)–2, ಆಸ್ತಾ ಚೌಧರಿ (ಅಸ್ಸಾಂ)–3. ಗುಂಪು 2: ಆಹಿಕಾ ರಾಮಚಂದ್ರ–1 ಕಾಲ: 2:11.37, ಶಿರಿನ್‌–2 (ಇಬ್ಬರೂ ಕರ್ನಾಟಕ), ಅನನ್ಯಾ ರಾವತ್‌ (ದೆಹಲಿ)–3. ಗುಂಪು 3: ಧಿನಿಧಿ ದೇಶಿಂಗು (ಕರ್ನಾಟಕ)–1 ಕಾಲ: 2:14.94 (ನೂತನ ದಾಖಲೆ), ಅದಿತಿ ಹೆಗ್ಡೆ (ಮಹಾರಾಷ್ಟ್ರ)–2, ಶಕ್ತಿ ಈಶ್ವರ್‌ ಪ್ರಸಾದ್‌ (ತಮಿಳುನಾಡು)–3. ಗುಂಪು 5: ಅಲಿಸ್ಸಾ ಸ್ವೀಡಲ್‌ ರೆಗೊ 1, ಕಾಲ:2:33.65 , ತ್ರಿಶಾ ಸಿಂಧು–2 (ಇಬ್ಬರೂ ಕರ್ನಾಟಕ), ಜೋಯಾ ಜನ್ನತ್‌ (ಬಂಗಾಳ)–3.

200 ಮೀ. ವೈಯಕ್ತಿಕ ಮೆಡ್ಲೆ: ಬಾಲಕರ ಗುಂಪು 1: ಸ್ವದೇಶ್ ಮಂಡಲ್‌ (ಬಂಗಾಳ)–1, ಕಾಲ: 2:08.88 (ನೂತನ ದಾಖಲೆ), ಶೋನ್ ಗಂಗೂಲಿ (ಕರ್ನಾಟಕ)–2, ಕಲ್ಪ್ ಎಸ್‌. ಬೊಹ್ರಾ (ಕರ್ನಾಟಕ)–3. ಗುಂಪು 2: ಪವನ್ ಧನಂಜಯ್‌ (ಕರ್ನಾಟಕ)–1, ಕಾಲ: 2:19.30, ನವನೀತ್ ಆರ್‌. ಗೌಡ (ಕರ್ನಾಟಕ)–2, ಉತ್ಕರ್ಷ್‌ ಗೋರ್‌ (ಮಹಾರಾಷ್ಟ್ರ)–3. ಗುಂಪು 5: ಜಾಸ್‌ ಸಿಂಗ್‌ (ಕರ್ನಾಟಕ)–1, ಕಾಲ: 2:52.65, ಕಬೀರ್ ಖೂಬ್‌ಚಾಂದನಿ (ಮಹಾರಾಷ್ಟ್ರ)–2, ಅಜೀತ್ ಯಾದವ್‌ (ಉತ್ತರಪ್ರದೇಶ)–3.

200 ಮೀ. ವೈಯಕ್ತಿಕ ಮೆಡ್ಲೆ: ಬಾಲಕಿಯರ ಗುಂಪು 1: ಅಪೇಕ್ಷಾ ಫರ್ನಾಂಡಿಸ್‌ (ಮಹಾರಾಷ್ಟ್ರ)–1, ಕಾಲ: 2:26.57, ದಿಶಾ ಭಂಡಾರಿ (ಉತ್ತರ ಪ್ರದೇಶ)–2, ಎ.ಜೆದಿದಾ (ಕರ್ನಾಟಕ)–3. ಗುಂಪು 5: ಆ್ಯಡ್ರಿಜಾ ಚೆಟಿಯಾ (ಅಸ್ಸಾಂ)–1, ಕಾಲ: 3:05.04, ಧೃತಿ ಕರಿಬಸವೇಶ್ವರ (ಕರ್ನಾಟಕ)–2, ಲಾಸ್ಯ ಶ್ರೀ ಕೆ. (ಆಂಧ್ರಪ್ರದೇಶ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT