ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಲೊ ಓಪನ್ ಬ್ಯಾಡ್ಮಿಂಟನ್‌: ಭಾರತದ ಸವಾಲು ಅಂತ್ಯ

ಶ್ರೀಕಾಂತ್‌, ತ್ರಿಶಾ–ಗಾಯತ್ರಿಗೆ ಸೋಲು
Last Updated 6 ನವೆಂಬರ್ 2022, 12:54 IST
ಅಕ್ಷರ ಗಾತ್ರ

ಸಾರ್‌ಬ್ರೂಕನ್‌, ಜರ್ಮನಿ: ಭಾರತದ ಕಿದಂಬಿ ಶ್ರೀಕಾಂತ್‌, ಗಾಯತ್ರಿ ಗೋಪಿಚಂದ್‌– ತ್ರಿಶಾ ಜೋಲಿ ಅವರು ಇಲ್ಲಿ ನಡೆಯುತ್ತಿರುವ ಹೈಲೊ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋಲನುಭವಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ದೇಶದ ಆಟಗಾರರ ಸವಾಲು ಅಂತ್ಯವಾಗಿದೆ.

ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ಶ್ರೀಕಾಂತ್‌18-21, 15-21ರಿಂದ ಇಂಡೊನೇಷ್ಯಾದ ಆ್ಯಂಟನಿ ಗಿಂಟಿಂಗ್ ಅವರಿಂದ ಪರಾಭವಗೊಂಡರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಗಿಂಟಿಂಗ್‌ 38 ನಿಮಿಷಗಳಲ್ಲಿ 2021ರ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಶ್ರೀಕಾಂತ್‌ಗೆ ಸೋಲುಣಿಸಿದರು.

ಇದಕ್ಕೂ ಮೊದಲು ಮಹಿಳಾ ಡಬಲ್ಸ್‌ನಲ್ಲಿ ತ್ರಿಶಾ– ಗಾಯತ್ರಿ21-17, 14-21 18-21ರಿಂದ ಥಾಯ್ಲೆಂಡ್‌ ಸಹೋದರಿಯರಾದ ಬೆನ್ಯಾಪಾ ಐಮ್‌ಸಾರ್ದ್‌ ಮತ್ತು ನೂಂತ್‌ಕರ್ನ್‌ ಐಮ್‌ಸಾರ್ದ್‌ ಅವರಿಗೆ ಮಣಿದರು. ಜಿದ್ದಾಜಿದ್ದಿನ ಈ ಪೈಪೋಟಿಯು ಒಂದು ತಾಸಿಗಿಂತ ಹೆಚ್ಚು ಸಮಯ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT