ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಾಂತ್‌, ಲಕ್ಷ್ಯ ಸೇನ್‌ ಮೇಲೆ ಕಣ್ಣು

ಹೈಲೊ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಕಣದಲ್ಲಿ ಸಮೀರ್ ವರ್ಮಾ
Last Updated 1 ನವೆಂಬರ್ 2021, 13:17 IST
ಅಕ್ಷರ ಗಾತ್ರ

ಸಾರ್‌ಬ್ರಕನ್‌, ಜರ್ಮನಿ: ಪ್ರಮುಖ ಆಟಗಾರ ಕಿದಂಬಿ ಶ್ರೀಕಾಂತ್ ಹಾಗೂ ಉತ್ತಮ ಲಯದಲ್ಲಿರುವ ಲಕ್ಷ್ಯ ಸೇನ್‌ ಅವರು ಮಂಗಳವಾರ ಆರಂಭವಾಗುವ ಹೈಲೊ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಶ್ರೀಕಾಂತ್ ಅವರು ಕಳೆದ ವಾರ ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಲಯಕ್ಕೆ ಮರಳಿರುವ ಸೂಚನೆ ನೀಡಿದ್ದರು. ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್, ಜಪಾನ್‌ನ ಕೆಂಟೊ ಮೊಮೊಟಾ ಎದುರು ವೀರೋಚಿತ ಹೋರಾಟ ತೋರಿ ಸೋತಿದ್ದರು.

ಅದೇ ಲಯ ಮುಂದುವರಿಸುವ ಛಲದಲ್ಲಿರುವ ಶ್ರೀಕಾಂತ್ ಅವರು ಹೈಲೊ ಟೂರ್ನಿಯ ಮೊದಲ ಸುತ್ತಿನಲ್ಲಿ ಜಪಾನ್‌ನ ಕೋಕಿ ವಾಟನ್‌ಬೆ ಅವರನ್ನು ಎದುರಿಸಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿರುವ ಲಕ್ಷ್ಯ, ಡೆನ್ಮಾರ್ಕ್‌ ಹಾಗೂ ಫ್ರೆಂಚ್‌ ಓಪನ್ ಟೂರ್ನಿಗಳಲ್ಲಿ ಕ್ರಮವಾಗಿ ಎರಡನೇ ಸುತ್ತು ಹಾಗೂ ಕ್ವಾರ್ಟರ್‌ಫೈನಲ್‌ಗಳಲ್ಲಿ ನಿರಾಸೆ ಅನುಭವಿಸಿದ್ದರು. ಇಲ್ಲಿ ಮೊದಲ ಸುತ್ತಿನಲ್ಲಿ ಅವರಿಗೆ ಫ್ರಾನ್ಸ್‌ನ ಥಾಮಸ್‌ ರೌಕ್ಸೆಲ್ ಸವಾಲು ಎದುರಾಗಿದೆ.

ಸಿಂಗಲ್ಸ್‌ ವಿಭಾಗದಲ್ಲಿ ಸಮೀರ್ ವರ್ಮಾ, ಮಾಜಿ ಚಾಂಪಿಯನ್‌ ಶುಭಾಂಕರ್ ಡೇ, ಎಚ್‌.ಎಸ್‌. ಪ್ರಣಯ್, ಸೌರಭ್ ವರ್ಮಾ ಕೂಡ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಬಿ.ಸುಮೀತ್ ರೆಡ್ಡಿ–ಮನು ಅತ್ರಿ, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ–ಎನ್.ಸಿಕ್ಕಿರೆಡ್ಡಿ ಕಳೆದ ಟೂರ್ನಿಗಳಲ್ಲಿ ಅನುಭವಿಸಿದ ನಿರಾಸೆ ಮರೆಯುವ ತವಕದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT