ಗುರುವಾರ , ಆಗಸ್ಟ್ 13, 2020
23 °C
ಭಾರತದ ಹೋರಾಟ ಅಂತ್ಯ

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಕ್ವಾರ್ಟರ್‌ಫೈನಲ್‌: ಶ್ರೀಕಾಂತ್‌ಗೆ ಸೋಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ವಾಲಲಂಪುರ: ರೋಚಕ ಹಣಾಹಣಿಯಲ್ಲಿ ಭಾರತದ ಕಿದಂಬಿ ಶ್ರೀಕಾಂತ್‌ ಅವರು ಒಲಿಂಪಿಕ್‌ ಚಾಂಪಿಯನ್‌ ಹಾಗೂ ನಾಲ್ಕನೇ ಶ್ರೇಯಾಂಕಿತ ಚೀನಾದ ಚೆನ್‌ ಲಾಂಗ್‌ ವಿರುದ್ಧ ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನ  ಸಿಂಗಲ್ಸ್‌ ವಿಭಾಗದಲ್ಲಿ ಸೋಲುಂಡಿದ್ದಾರೆ.

8ನೇ ಶ್ರೇಯಾಂಕಿತ ಶ್ರೀಕಾಂತ್‌ ಅವರು ಮೊದಲ ಸುತ್ತಿನ ವಿರಾಮದ ವೇಳೆಗೆ 11–7 ರಿಂದ ಮುನ್ನಡೆ ಕಾಯ್ದುಕೊಂಡಿದ್ದರು. ಈ ಹಂತದಲ್ಲಿ ತಿರುಗೇಟು ನೀಡಿದ ಚೆನ್‌ ಪ್ರಬಲ ಹೋರಾಟ ನೀಡಿದರು. ಒಂದು ಹಂತದಲ್ಲಿ 17–17ರ ಸಮಬಲ ಕಾಯ್ದುಕೊಂಡರು. ಅಂತಿಮವಾಗಿ 18–21ರಿಂದ ಶ್ರೀಕಾಂತ್‌ ಸೋಲೊಪ್ಪಿಕೊಂಡರು.

ಎರಡನೇ ಪಂದ್ಯದ ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟ ಆರಂಭಿಸಿದ ಶ್ರೀಕಾಂತ್‌  11–7ರಿಂದ  ಮುನ್ನಡೆ ಕಾಯ್ದುಕೊಂಡರು. ಆದರೆ ಕೆಲವೊಂದು ತಪ್ಪುಗಳಿಂದ ಅಂಕ ಕಳೆದುಕೊಂಡರು. ಇದರಿಂದ ಚೆನ್‌ 16–8 ಅಂಕ ಪಡೆದುಕೊಂಡರು.

ಮೊದಲ ಪಂದ್ಯದಂತೆ 19–19 ಅಂಕಗಳ ಸಮಬಲ ಕಾಯ್ದುಕೊಂಡರು.  ಈ ವೇಳೆ ಬಿರುಸಿನ ಹೊಡೆತದಿಂದ ಆಟವನ್ನು ತಮ್ಮತ್ತ ತಿರುಗಿಸಿದ ಚೆನ್, ಕೊನೆಗೆ 19–21 ರ ಅಂತರದಿಂದ ಗೆಲುವಿನ ನಗೆ ಬೀರಿದರು.

ಆರಂಭಿಕ ಸುತ್ತಿನಲ್ಲಿ ಸಮೀರ್‌ ವರ್ಮಾ ಸೋತ ಬಳಿಕ ಭಾರತದ ಪರ ಶ್ರೀಕಾಂತ್‌ ಮಾತ್ರ ಕಣದಲ್ಲಿದ್ದರು. ಇದೀಗ, ಇವರ ಸೋಲಿನ ಮೂಲಕ ಭಾರತದ ಹೋರಾಟ ಅಂತ್ಯಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು