ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳಿಗೆ ಶೀಘ್ರ ಡಿಜಿಟಲ್ ಬೋರ್ಡ್

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 9ರಿಂದ 12ನೇ ತರಗತಿಗಳಿಗೆ ಡಿಜಿಟಲ್ ಬೋರ್ಡ್‌ಗಳನ್ನು ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ.

ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹಾಗೂ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮ ಇವುಗಳನ್ನು ಒಂದಾಗಿ ಜಾರಿಗೆ ತರಲು ಈಚೆಗೆ ‘ಸಮಗ್ರ ಶಿಕ್ಷಣ ಅಭಿಯಾನ’ ಆರಂಭಿಸಲಾಗಿದ್ದು, ಇದರ ಅಡಿಯಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ನೀಡಲಾಗುತ್ತದೆ.

ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಯೋಜನೆ ಅಂತಿಮಗೊಳಿಸುತ್ತಿದೆ. 

ಶಿಕ್ಷಣ ಗುಣಮಟ್ಟ ಸುಧಾರಣೆ: ಐಸಿಟಿ (ಮಾಹಿತಿ ಸಂವಹನ ತಂತ್ರಜ್ಞಾನ) ಜತೆಗೆ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸುವುದರಿಂದ ಶಾಲೆಗಳಲ್ಲಿನ ಶಿಕ್ಷಣ ಗುಣಮಟ್ಟ ಸುಧಾರಿಸಲಿದೆ ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್ ಜಾವಡೇಕರ್‌ ಭರವಸೆ ವ್ಯಕ್ತಪಡಿಸಿದ್ದಾರೆ.

1987ರಲ್ಲಿ ರಾಜೀವ್ ಗಾಂಧಿ ಆಡಳಿತದ ಅವಧಿಯಲ್ಲಿ ದೇಶದಾದ್ಯಂತ ಶಾಲೆಗಳಿಗೆ ಕಪ್ಪುಹಲಗೆ ವಿತರಿಸುವ ‘ಆಪರೇಷನ್ ಬ್ಲ್ಯಾಕ್‌ಬೋರ್ಡ್’ ಆರಂಭಿಸಲಾಗಿತ್ತು.

‘ಶಾಲೆಗಳಲ್ಲಿ ಕಪ್ಪುಹಲಗೆ ಇಲ್ಲದ ಕಾರಣ ಆ ಯೋಜನೆ ಆರಂಭಿಸಲಾಗಿತ್ತು. ಈಗ ಆಪರೇಷನ್ ಡಿಜಿಟಲ್ ಬೋರ್ಡ್‌ಗಳನ್ನು ಆರಂಭಿಸಲಾಗುತ್ತದೆ.

ದೇಣಿಗೆ ಪಡೆಯಲು ಚಿಂತನೆ

‘ಡಿಜಿಟಿಲ್ ಬೋರ್ಡ್‌ಗಳನ್ನು ಖರೀದಿಸಲು ಹಾಗೂ ಸರ್ಕಾರಿ ಶಾಲೆಗಳಲ್ಲಿ ಅವುಗಳನ್ನು ಅಳವಡಿಸಲು ಹೆಚ್ಚು ವೆಚ್ಚವಾಗುವುದರಿಂದ, ಉದ್ಯಮ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಉದ್ಯಮ ಸಂಸ್ಥೆಗಳಿಂದ ದೇಣಿಗೆ ಪಡೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆಧುನಿಕ ತರಗತಿ ಮಾದರಿ

ಡಿಜಿಟಲ್ ಬೋರ್ಡ್‌ಗಳ ಅಳವಡಿಕೆಯಿಂದ ಬೋಧನೆ ಮತ್ತು ಕಲಿಕೆಗೆ ‘ಅಂತರ್ಜಾಲ ಆಧರಿತ ಆಧುನಿಕ ತರಗತಿ ಮಾದರಿ’ ಅನುಸರಿಸಲು ಅವಕಾಶವಾಗುತ್ತದೆ.

ಈ ಮಾದರಿ ಅನುಸಾರ, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವ ಮೊದಲು ವಿಷಯಕ್ಕೆ ಸಂಬಂಧಪಟ್ಟ ಸಣ್ಣ ವಿಡಿಯೊ ತುಣುಕುಗಳನ್ನು ವೀಕ್ಷಿಸಿರುತ್ತಾರೆ. ಇದರಿಂದಾಗಿ ವಿಷಯದ ಬೋಧನೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳು, ಚರ್ಚೆಗಳಿಗೆ ತರಗತಿಗಳಲ್ಲಿ ಹೆಚ್ಚಿನ ಸಮಯ ಮೀಸಲಿಡಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT