ಗುರುವಾರ , ನವೆಂಬರ್ 21, 2019
21 °C

14ರಿಂದ ಸಬ್‌ ಜೂನಿಯರ್‌ ಬಾಲ್‌ ಬ್ಯಾಡ್ಮಿಂಟನ್‌

Published:
Updated:

ಬೆಂಗಳೂರು: ಬಾಲ್‌ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಆಫ್‌ ಕರ್ನಾಟಕ, ಬೆಂಗಳೂರು ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆ ಹಾಗೂ ರಾಜರಾಜೇಶ್ವರಿ ಯೂತ್ ಕ್ಲಬ್‌ ಸಹಯೋಗದಲ್ಲಿ ಇದೇ ತಿಂಗಳ 14 ಮತ್ತು 15ರಂದು ರಾಜ್ಯ ಸಬ್‌ ಜೂನಿಯರ್ ಲೀಗ್‌ ಚಾಂಪಿಯನ್‌ಷಿಪ್‌ ಆಯೋಜಿಸಲಾಗಿದೆ.

15 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರು ಇದರಲ್ಲಿ ಭಾಗವಹಿಸಬಹುದಾಗಿದೆ. ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಕ್ರೀಡಾಪಟುಗಳನ್ನು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ರಾಜ್ಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ.

ಆಸಕ್ತರು,ಇದೇ 13ರ ಸಂಜೆ 5ಗಂಟೆಯೊಳಗಾಗಿ ಬೆಂಗಳೂರಿನ ಆರ್‌.ಆರ್‌.ನಗರದಲ್ಲಿರುವ ರಾಜರಾಜೇಶ್ವರಿ ವಿದ್ಯಾಶಾಲೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಈ ಸಮಯದಲ್ಲಿ ಜನನ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯ.

ಹೆಚ್ಚಿನ ಮಾಹಿತಿಗೆ ಬಾಲ್‌ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಆಫ್‌ ಕರ್ನಾಟಕದ ಕಾರ್ಯದರ್ಶಿ ದಿನೇಶ್‌ (ಮೊಬೈಲ್‌: 9448488783) ಅವರನ್ನು ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)