ಬ್ಯಾಸ್ಕೆಟ್‌ಬಾಲ್‌: ಬೀಗಲ್ಸ್‌ಗೆ ಜಯ

ಬುಧವಾರ, ಮಾರ್ಚ್ 20, 2019
31 °C

ಬ್ಯಾಸ್ಕೆಟ್‌ಬಾಲ್‌: ಬೀಗಲ್ಸ್‌ಗೆ ಜಯ

Published:
Updated:
Prajavani

ಬೆಂಗಳೂರು: ಚೇತನ್‌ ಅವರ ಅಮೋಘ ಆಟದ ಬಲದಿಂದ ಬೀಗಲ್ಸ್‌ ಕ್ಲಬ್‌ ತಂಡ ಎನ್‌.ಸಿ.ಪರಪ್ಪ ಸ್ಮಾರಕ ರಾಜ್ಯ ‘ಎ’ ಡಿವಿಷನ್‌ ಲೀಗ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬೀಗಲ್ಸ್‌ 71–67 ಪಾಯಿಂಟ್ಸ್‌ನಿಂದ ಸದರ್ನ್‌ ಬ್ಲೂಸ್‌ ತಂಡವನ್ನು ಪರಾಭವಗೊಳಿಸಿತು.

ಬೀಗಲ್ಸ್‌ ತಂಡದ ಚೇತನ್‌ 25 ಪಾಯಿಂಟ್ಸ್‌ ಕಲೆಹಾಕಿದರು. ವರುಣ್‌ 18 ಪಾಯಿಂಟ್ಸ್‌ ಗಳಿಸಿದರು.

ಬ್ಲೂಸ್‌ ತಂಡದ ಡೆನ್ಸಿಲ್‌ ಮತ್ತು ಬೆಂಜಮಿನ್‌ ಕ್ರಮವಾಗಿ 22 ಮತ್ತು 12 ಪಾಯಿಂಟ್ಸ್‌ ಕಲೆಹಾಕಿ ಸೋಲಿನ ನಡುವೆಯೂ ಗಮನ ಸೆಳೆದರು.

ಜೆಎಸ್‌ಸಿ 57–46 ಪಾಯಿಂಟ್ಸ್‌ನಿಂದ ಯಂಗ್‌ ಓರಿಯನ್ಸ್‌ ಎದುರು ಗೆದ್ದಿತು. ವಿಜಯೀ ತಂಡದ ಸಚಿನ್‌ (17) ಮತ್ತು ಶ್ರೀರಾಮ್‌ (14) ಮೋಡಿ ಮಾಡಿದರು. ಓರಿಯನ್ಸ್‌ ತಂಡದ ಜೇಸನ್‌ ಮತ್ತು ವೆಂಕಟ ರಮಣನ್‌ ಕ್ರಮವಾಗಿ 17 ಮತ್ತು 10 ಪಾಯಿಂಟ್ಸ್‌ ಹೆಕ್ಕಿದರು.

ಬಿಎಸ್‌ಎನ್‌ಎಲ್‌ 70–68ರಲ್ಲಿ ಎನ್‌.ಜಿ.ವಿ.ಕ್ಲಬ್‌ ತಂಡವನ್ನು ಸೋಲಿಸಿತು. ಬಿಎಸ್‌ಎನ್‌ಎಲ್‌ ತಂಡದ ತ್ರಿಶೂಲ್‌ ಮತ್ತು ಸತ್ಯ ಕ್ರಮವಾಗಿ 18 ಮತ್ತು 17 ಪಾಯಿಂಟ್ಸ್‌ ಗಳಿಸಿದರು.

ಇನ್ನೊಂದು ಹಣಾಹಣಿಯಲ್ಲಿ ಮಂಗಳೂರು ಕ್ಲಬ್‌ 35–19ರಲ್ಲಿ ಡಿವೈಇಎಸ್ ಬೆಂಗಳೂರು ತಂಡದ ಎದುರು ವಿಜಯಿಯಾಯಿತು.

ಸೌಕಿನ್‌ (14) ಮತ್ತು ಶಶಾಂಕ್‌ (14) ಅವರು ಮಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !