ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಬೀಗಲ್ಸ್‌ಗೆ ರೋಚಕ ಜಯ

Last Updated 26 ಫೆಬ್ರುವರಿ 2019, 16:00 IST
ಅಕ್ಷರ ಗಾತ್ರ

ಬೆಂಗಳೂರು: ಚೇತನ್‌ ಅವರ ಮಿಂಚಿನ ಆಟದ ಬಲದಿಂದ ಬೀಗಲ್ಸ್‌ ಕ್ಲಬ್‌ ತಂಡ ಎನ್‌.ಸಿ.ಪರಪ್ಪ ಸ್ಮಾರಕ ರಾಜ್ಯ ‘ಎ’ ಡಿವಿಷನ್‌ ಲೀಗ್ ಬ್ಯಾಸ್ಕೆಟ್‌ಬಾಲ್‌ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹೋರಾಟದಲ್ಲಿ ಬೀಗಲ್ಸ್‌ 81–79 ಪಾಯಿಂಟ್ಸ್‌ನಿಂದ ಜೆಎಸ್‌ಸಿ ತಂಡವನ್ನು ಸೋಲಿಸಿತು. ವಿಜಯೀ ತಂಡದ ಚೇತನ್‌ ಮತ್ತು ದೇವಿ ಪ್ರಸಾದ್‌ ಕ್ರಮವಾಗಿ 33 ಮತ್ತು 19 ಪಾಯಿಂಟ್ಸ್‌ ಗಳಿಸಿದರು.

ಇತರ ಪಂದ್ಯಗಳಲ್ಲಿ ವಿಜಯ ಬ್ಯಾಂಕ್‌ 78–33ರಲ್ಲಿ ಡಿವೈಇಎಸ್‌ ಬೆಂಗಳೂರು ಎದುರೂ, ಎಎಸ್‌ಸಿ 54–39ರಲ್ಲಿ ಬಿಎಸ್‌ಎನ್‌ಎಲ್‌ ವಿರುದ್ಧವೂ, ಮಂಗಳೂರು ಬಿ.ಸಿ 72–65ರಲ್ಲಿ ಎನ್‌.ಜಿ.ವಿ. ಕ್ಲಬ್‌ ಮೇಲೂ, ಯಂಗ್‌ ಓರಿಯನ್ಸ್‌ 66–46ರಲ್ಲಿ ರೈಸಿಂಗ್‌ ಸ್ಟಾರ್‌ ಮೈಸೂರು ವಿರುದ್ಧವೂ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT