ಶುಕ್ರವಾರ, ನವೆಂಬರ್ 22, 2019
22 °C

ಜೂನಿಯರ್ ಬ್ಯಾಸ್ಕೆಟ್‌ಬಾಲ್: ಬಿ ಗುಂಪಿನಲ್ಲಿ ಕರ್ನಾಟಕ

Published:
Updated:

ಬೆಂಗಳೂರು: ಪಟ್ನಾದಲ್ಲಿ ಗುರುವಾರದಿಂದ ಅಕ್ಟೋಬರ್ 24ರ ವರೆಗೆ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪುರುಷರ ತಂಡ ‘ಬಿ’ ಗುಂಪಿನಲ್ಲೂ ಮಹಿಳೆಯರ ತಂಡ ‘ಎ’ ಗುಂಪಿನಲ್ಲೂ ಸ್ಥಾನ ಗಳಿಸಿದೆ.

ಪುರುಷರ ತಂಡದಲ್ಲಿ ಕರ್ನಾಟಕದೊಂದಿಗೆ ರಾಜಸ್ಥಾನ, ಪಂಜಾಬ್‌, ತಮಿಳುನಾಡು ಮತ್ತು ಚಂಡೀಗಢ ತಂಡಗಳಿವೆ. ಹಾಲಿ ಚಾಂಪಿಯನ್ ಕೇರಳ ‘ಎ’ ಗುಂಪಿನಲ್ಲಿದೆ. ಮಹಿಳೆಯರ ವಿಭಾಗದಲ್ಲಿ ಗುಜರಾತ್‌, ಮಹಾರಾಷ್ಟ್ರ, ಹರಿಯಾಣ ಮತ್ತು ಹಾಲಿ ಚಾಂಪಿಯನ್‌ ತಮಿಳುನಾಡು ತಂಡಗಳು ‘ಎ’ ಗುಂಪಿನಲ್ಲಿವೆ. ರಾಜ್ಯದ ಪುರುಷ ಮತ್ತು ಮಹಿಳಾ ತಂಡಗಳನ್ನು ಕ್ರಮವಾಗಿ ಪ್ರಶಾಂತ್ ತೋಮರ್ ಮತ್ತು ಮಾನಸ ಬಿ.ಪಿ ಮುನ್ನಡೆಸುವರು.

ಪುರುಷರ ತಂಡ: ಪ್ರಶಾಂತ್ ತೋಮರ್‌ (ನಾಯಕ), ಸೇತು ಜೆ, ಮನೋಜ್ ಬಿ.ಎಂ, ಅರ್ಪಣ್‌, ಅಚಿಂತ್ಯ ಕೃಷ್ಣ, ಶ್ರೇಯಸ್ ಶ್ರೀನಿವಾಸ್‌, ಸುದೀಪ್‌ ಎಂ, ಶಶಾಂಕ್ ಸಾಯಿ, ಮೊಹಮ್ಮದ್ ಅಮೀನ್ ರಫೀಕ್, ಕರಣ್ ಕುಮಾರ್, ನವನೀತ್, ಧವನ್ ಎಸ್. ಬೋಜ. ಕೋಚ್: ಎಂ.ಸಿ ತಂಗಚ್ಚನ್‌, ಮ್ಯಾನೇಜರ್: ಗುಣಶೇಖರ್. ಮಹಿಳೆಯರ ತಂಡ: ಮಾನಸ ಬಿ.ಪಿ (ನಾಯಕಿ), ಸಂಜನಾ ಎನ್‌.ಕುಮಾರ್, ಹರಿಣಿ ಎಂ.ಎಸ್‌, ಸಹನಾ ಎಂ, ಸೋನಿಕಾ ಆರ್‌.ಡಿ, ಜೀಶ್ನವಿ, ಅನಘಾ ಜಿ.ಸಿ, ಮೇಕಲಾ ಗೌಡ, ಪಾವನಿ, ದಿಯಾ ಸಿರಾಜ್, ರುಚಿಕಾ, ಅಬಿಗೈಲ್. ಕೋಚ್‌: ಬಿ.ಎಸ್.ಗಿರೀಶ್‌, ಮ್ಯಾನೇಜರ್: ಮೋಹನ್ ಕುಮಾರ್ ಜೆ.ಇ.

ಪ್ರತಿಕ್ರಿಯಿಸಿ (+)